ಮಳೆಭಾದಿತ ಪಂದ್ಯ: ಪಂಜಾಬ್ ಗೆ ಭರ್ಜರಿ ಗೆಲುವು

ಮಳೆಭಾದಿತ ಪಂದ್ಯ: ಪಂಜಾಬ್ ಗೆ ಭರ್ಜರಿ ಗೆಲುವು

HSA   ¦    Apr 22, 2018 09:01:26 AM (IST)
ಮಳೆಭಾದಿತ ಪಂದ್ಯ: ಪಂಜಾಬ್ ಗೆ ಭರ್ಜರಿ ಗೆಲುವು

ನವದೆಹಲಿ: ಕೆಎಲ್ ರಾಹುಲ್ ಮತ್ತು ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 9 ವಿಕೆಟ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ದಾಖಲಿಸಿಕೊಂಡಿತು.

ರಾಹುಲ್ ಕೇವಲ 27 ಎಸೆತಗಳಲ್ಲಿ 60 ರನ್ ಮಾಡಿದರೆ, ಗೇಲ್ 38 ಎಸೆತಗಳಲ್ಲಿ 62 ರನ್ ಬಾರಿಸಿ ನಾಟೌಟ್ ಆದರು. ಮಳೆಭಾದಿತ ಪಂದ್ಯದಲ್ಲಿ ಪಂಜಾಬ್ ಗೆ 13 ಓವರ್ ಗಳಲ್ಲಿ 125 ರನ್ ಮಾಡಬೇಕಿತ್ತು. ರಾಹುಲ್ ಮತ್ತು ಗೇಲ್ ಮಳೆಗೆ ಮೊದಲೇ ಪಂಜಾಬ್ ಗೆ ಉತ್ತಮ ಆರಂಭ ಕೊಟ್ಟ ಕಾರಣ ಪಂಜಾಬ್ ಗೆ ಗೆಲುವು ಕಷ್ಟವಾಗಲಿಲ್ಲ.

ಇದಕ್ಕೆ ಮೊದಲು ಕ್ರಿಸ್ ಲೆನ್ 74 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಇದರ ಬಳಿಕ ಕೆಕೆಆರ್ ಕಪ್ತಾನ ದಿನೇಶ್ ಕಾರ್ತಿಕ್ 43 ರನ್ ಬಾರಿಸಿ ಕೊಲ್ಕತ್ತಾ 191 ರನ್ ಗಳ ದೊಡ್ಡ ಮೊತ್ತ ಪೇರಿಸಲು ನೆರವಾದರು.