ಆರನೇ ಕ್ರಮಾಂಕಕ್ಕೆ ರೋಹಿತ್-ಹನುಮ ವಿಹಾರಿ ಸ್ಪರ್ಧೆ

ಆರನೇ ಕ್ರಮಾಂಕಕ್ಕೆ ರೋಹಿತ್-ಹನುಮ ವಿಹಾರಿ ಸ್ಪರ್ಧೆ

HSA   ¦    Dec 05, 2018 03:04:04 PM (IST)
ಆರನೇ ಕ್ರಮಾಂಕಕ್ಕೆ ರೋಹಿತ್-ಹನುಮ ವಿಹಾರಿ ಸ್ಪರ್ಧೆ

ಅಡಿಲೇಡ್: ಗುರುವಾರದಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗೆ ಭಾರತ ತಂಡದ 12 ಆಟಗಾರರನ್ನು ಹೆಸರಿಸಲಾಗಿದೆ.

ರೋಹಿತ್ ಶರ್ಮಾ ಮತ್ತು ಆಲ್ ರೌಂಡರ್ ಹನುಮ ವಿಹಾರಿ ಅವರು ಆರನೇ ಕ್ರಮಾಂಕದಲ್ಲಿ ಆಡಲು ಸ್ಪರ್ಧೆ ನಡೆಸಲಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಾಳುವಾದ ಕಾರಣ ಆರನೇ ಕ್ರಮಾಂಕವು ಖಾಲಿಯಾಗಿದೆ.

2014-15ರಲ್ಲಿ ರೋಹಿತ್ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಗೈದಿದ್ದರು. ಇದರಿಂದ ಆಸ್ಟ್ರೇಲಿಯಾದ ವಾತಾವರಣ ಹಾಗೂ ಇಲ್ಲಿನ ಪಿಚ್ ಗಳ ಬಗ್ಗೆ ಸರಿಯಾದ ಅನುಭವ ಹೊಂದಿರುವರು.

ಚೊಚ್ಚಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 56 ರನ್ ಬಾರಿಸಿ, ಮೂರು ವಿಕೆಟ್ ಪಡೆದಿದ್ದ ಹನುಮ ವಿಹಾರಿ ಅವರು ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ.

ವೇಗಿಗಳಾಗಿ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಆರಂಭಿಕ ಆಟಗಾರ ಪ್ರಥ್ವಿ ಶಾ ಗಾಯಾಳು ಸಮಸ್ಯೆಯಿಂದ ಹೊರಗುಳಿದಿರುವ ಕಾರಣ ಮುರಳಿ ವಿಜಯ್ ಜತೆಗೆ ಲೋಕೇಶ್ ರಾಹುಲ್ ಆರಂಭಿಕನಾಗಿ ಆಡುವರು.

ತಂಡ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ.