ಟೆಕ್ವಾಂಡೊ: ಕೊಡಗಿನ ವಿದ್ಯಾರ್ಥಿಗಳಿಗೆ 14ಚಿನ್ನ, 17ಬೆಳ್ಳಿ, 36ಕಂಚು

ಟೆಕ್ವಾಂಡೊ: ಕೊಡಗಿನ ವಿದ್ಯಾರ್ಥಿಗಳಿಗೆ 14ಚಿನ್ನ, 17ಬೆಳ್ಳಿ, 36ಕಂಚು

CI   ¦    Jan 18, 2020 10:30:31 AM (IST)
ಟೆಕ್ವಾಂಡೊ: ಕೊಡಗಿನ ವಿದ್ಯಾರ್ಥಿಗಳಿಗೆ 14ಚಿನ್ನ, 17ಬೆಳ್ಳಿ, 36ಕಂಚು

ಮಡಿಕೇರಿ: ಕರ್ನಾಟಕ ಟೆಕ್ವಾಂಡೊ ಸಂಸ್ಥೆ ಹಾಗೂ ಪ್ರಿನ್ಸ್ ಟೆಕ್ವಾಂಡೊ ಅಕಾಡೆಮಿ ಇದರ ಸಹಯೋಗದಲ್ಲಿ ಬೆಂಗಳೂರಿನ ವಿಜ್ಞಾನ ನಗರದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಸಬ್ ಜೂನಿಯರ್, ಕೆಡೆಟ್, ಜೂನಿಯರ್ ಹಾಗೂ ಸಿನಿಯರ್ ಟೆಕ್ವಾಂಡೊ ಚಾಂಪಿಯನ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು 14 ಚಿನ್ನ, 17 ಬೆಳ್ಳಿ ಹಾಗೂ 36 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ಕ್ರೀಡಾಪಟುಗಳಾದ ಬಿ.ಎಸ್. ದೃತಿ ಹೃಷಿಕಾ 2 ಚಿನ್ನ, 2 ಕಂಚು, ತೆನ್ನೀರಾ ಶಾನ್ ಪೊನ್ನಪ್ಪ 1 ಚಿನ್ನ 2 ಕಂಚು, ದೀಪಿಕಾ ಬೋಪಯ್ಯ 1 ಚಿನ್ನ, 1 ಕಂಚು, ಲತಿಕಾ ಎಸ್ ನಾಯಕ್ 1 ಚಿನ್ನ 2 ಕಂಚು, ಆರ್. ಲೋಹಿತ್ 1 ಚಿನ್ನ, 1 ಬೆಳ್ಳಿ, 1 ಕಂಚು, ಸಿ.ಎಸ್. ಮೌರ್ಯ 1 ಚಿನ್ನ, 2 ಕಂಚು ತಮ್ಮದಾಗಿಸಿಕೊಂಡಿದ್ದಾರೆ.
ವಿ.ಎ. ಅರ್ವಿನ್ 1 ಚಿನ್ನ, 2 ಕಂಚು, ಐಚಂಡ ಎಂ. ತನೀಶ್ ತಮ್ಮಯ್ಯ 1 ಚಿನ್ನ 1 ಕಂಚು, ಸಿ. ವೈ. ದಿವಿತ್ 1 ಚಿನ್ನ, 1 ಬೆಳ್ಳಿ, 1 ಕಂಚು, ಎಮ್.ಎಸ್. ಬಿಲಾಲ್ 1 ಚಿನ್ನ, 1 ಬೆಳ್ಳಿ, ಕೆ.ಟಿ. ಎಬೀನ್ 1 ಚಿನ್ನ, 1 ಕಂಚು, ಎಮ್.ಎ. ಸೋಮಣ್ಣ 1 ಚಿನ್ನ, 1 ಕಂಚು, ಎಮ್ ಕಾರ್ತಿಕ್ ನಾಯಕ್ 1 ಚಿನ್ನ, 1 ಬೆಳ್ಳಿ, 1 ಕಂಚು, ಪೂರ್ವಿಕ್ ವೆಂಕಪ್ಪ 2 ಬೆಳ್ಳಿ, ಬಿ.ಎಲ್. ಭಾವನಾ (ಐಶು) 1 ಬೆಳ್ಳಿ, 2 ಕಂಚು, ಕೆ.ಎಲ್. ಮಿಂಚು 2 ಬೆಳ್ಳಿ, ಮಾನ್ವಿ ಜಿ. ವೆರ್ನೆಕರ್ 2 ಬೆಳ್ಳಿ, 1 ಕಂಚು, ಗೌರವ್ ಎಮ್. ಯೋಗೀಶ್ 2 ಬೆಳ್ಳಿ, 1 ಕಂಚು, ಬವೀಶ್ ಬಿ. ಅಶೋಕ್ 2 ಬೆಳ್ಳಿ, ಪಿ. ದರ್ಶನ್ 2 ಕಂಚು, ಪಿ.ಎಮ್. ಹಿತೇಶ್ ಕಾರ್ಯಪ್ಪ 2 ಕಂಚು, ಬಿ. ಆರ್. ಸುಹಾನ್ 2 ಕಂಚು, ಜಿ.ಜಿ. ಪ್ರೀತಮ್ 1 ಕಂಚು, ಪೂಜಾರಿರ ಬೃಹತ್ ಬೋಪಯ್ಯ 3 ಕಂಚು, ಆರ್. ಕುಶಾ 1 ಬೆಳ್ಳಿ, 1 ಕಂಚು, ಕೋಚನ ಯಶಸ್ ಗಿರೀಶ್ 2 ಕಂಚು, ಕಿರುವಾಲೆ ವಿನಯ್ ಕಾಂತರಾಜ್ 1 ಕಂಚು, ಭುವನ್ ಎಸ್. ಗೌಡ 2 ಕಂಚು ಗೆದ್ದುಕೊಂಡಿದ್ದಾರೆ.

ಇವರು ತರಬೇತುದಾರರಾದ ಬಿ.ಜಿ. ಲೋಕೇಶ್ ರೈ ಹಾಗೂ ಸಹಾ ತರಬೇತುದಾರರಾದ ಶಾಂತೆಯಂಡ ತಿಮ್ಮಯ್ಯ ಅವರಲ್ಲಿ ತರಬೇತಿ ಪಡೆದಿದ್ದಾರೆ.