ಧೋನಿ, ಜಾಧವ್ ಸಾಹಸ: ಟೀಂ ಇಂಡಿಯಾಗೆ ಐತಿಹಾಸಿಕ ಸರಣಿ ಗೆಲುವು

ಧೋನಿ, ಜಾಧವ್ ಸಾಹಸ: ಟೀಂ ಇಂಡಿಯಾಗೆ ಐತಿಹಾಸಿಕ ಸರಣಿ ಗೆಲುವು

HSA   ¦    Jan 18, 2019 04:38:27 PM (IST)
ಧೋನಿ, ಜಾಧವ್ ಸಾಹಸ: ಟೀಂ ಇಂಡಿಯಾಗೆ ಐತಿಹಾಸಿಕ ಸರಣಿ ಗೆಲುವು

ಮೆಲ್ಬೊರ್ನ್: ಯಜುವೇಂದ್ರ ಚಾಹಲ್ ತನ್ನ ಸ್ಪಿನ್ ಮೋಡಿಯಿಂದ ಆರು ವಿಕೆಟ್ ಉರುಳಿಸಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೇದಾರ್ ಜಾಧವ್ ಅಮೋಘ ಪ್ರದರ್ಶನ ನೀಡಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲುವಿಗೆ ನೆರವಾಗಿದ್ದಾರೆ.

ಧೋನಿ ಮತ್ತು ಜಾಧವ್ ಅರ್ಧಶತಕದ ನೆರವಿನಿಂದ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ ಏಳು ವಿಕೆಟ್ ಗೆಲುವು ದಾಖಲಿಸಿಕೊಂಡ ಟೀಂ ಇಂಡಿಯಾ 2-1ರಿಂದ ಸರಣಿ ಗೆಲುವು ಪಡೆದುಕೊಂಡಿದೆ.

ಆಸ್ಟ್ರೇಲಿಯಾ ನೆಲದಲ್ಲಿ ದ್ವಿಪಕ್ಷೀಯವಾಗಿ ನಡೆದ ಸರಣಿಯಲ್ಲಿ ಸಿಕ್ಕಿ ಪ್ರಪ್ರಥಮ ಗೆಲುವು ಇದಾಗಿದೆ.

ಚಾಹಲ್ ಮಾರಕ ಬೌಲಿಂಗ್ ನಿಂದಾಗಿ ಆಸೀಸ್ 230 ರನ್ ಗಳಿಗೆ ಆಲೌಟ್ ಆಯಿತು. ಭಾರತ ಮೂರು ವಿಕೆಟ್ ಗಳನ್ನು ಬೇಗನೆ ಕಳಕೊಂಡರೂ ಧೋನಿ 87 ಮತ್ತು ಜಾಧವ್ 61 ರನ್ ಮಾಡಿ ನಾಟೌಟ್ ಆಗಿ ಉಳಿದು ಮೂರನೇ ಏಕದಿನ ಹಾಗೂ ಸರಣಿ ಗೆಲುವಿಗೆ ನೆರವಾದರು.

ಧೋನಿ 114 ಎಸೆತಗಳಲ್ಲಿ ಆರು ಬೌಂಡರಿ ಸಹಿತ 87 ರನ್ ಮತ್ತು ಜಾಧವ್ 57 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 57 ರನ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮೊದಲು ಚಾಹಲ್ 42 ರನ್ ಗಳಿಗೆ ಆರು ವಿಕೆಟ್ ಕಿತ್ತು ಆಸೀಸ್ ನ ಮಧ್ಯಮ ಹಾಗೂ ಕೆಳಸರದಿ ಮೇಲೆ ಪ್ರಹಾರ ಮಾಡಿದರು.

ಚಾಹಲ್ ಪಂದ್ಯಶ್ರೇಷ್ಠ ಮತ್ತು ಧೋನಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

More Images