ಐಸಿಸಿ ಟೆಸ್ಟ್ ಆಲ್‌ರೌಂಡರ್ ಮತ್ತು ಬೌಲಿಂಗ್ ರ್ಯಾಂಕಿಗ್: ಎರಡರಲ್ಲಿಯೂ ಜಡೇಜಾ ನಂಬರ್‌‌ 1

ಐಸಿಸಿ ಟೆಸ್ಟ್ ಆಲ್‌ರೌಂಡರ್ ಮತ್ತು ಬೌಲಿಂಗ್ ರ್ಯಾಂಕಿಗ್: ಎರಡರಲ್ಲಿಯೂ ಜಡೇಜಾ ನಂಬರ್‌‌ 1

Aug 08, 2017 05:45:46 PM (IST)
ಐಸಿಸಿ ಟೆಸ್ಟ್ ಆಲ್‌ರೌಂಡರ್ ಮತ್ತು ಬೌಲಿಂಗ್ ರ್ಯಾಂಕಿಗ್: ಎರಡರಲ್ಲಿಯೂ ಜಡೇಜಾ ನಂಬರ್‌‌ 1

ಹೊಸದಿಲ್ಲಿ: ಐಸಿಸಿ ಹೊಸದಾಗಿ ಬಿಡುಗಡೆ ಮಾಡಿದ ಟೆಸ್ಟ್ ಆಲ್ ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರನ್ನು ಹಿಂದಿಕ್ಕಿ ಮೊದಲನೇ ಸ್ಥಾನಕ್ಕೇರಿದ್ದಾರೆ.

ಇದೀಗ ಆಲ್‌ರೌಂಡರ್ ವಿಭಾಗದಲ್ಲಿ ನಂಬರ್‌‌ 1 ಸ್ಥಾನದಲ್ಲಿರುವ ಜಡೇಜಾ ಐಸಿಸಿ ಟೆಸ್ಟ್ ಬೌಲಿಂಗ್ ವಿಭಾಗದಲ್ಲಿಯೂ ಅಗ್ರಸ್ಥಾನದಲ್ಲಿದ್ದಾರೆ.

ಜಡೇಜಾ ಪ್ರಸಕ್ತ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಎರಡನೇ ಟೆಸ್ಟ್‌ನಲ್ಲಿ 7 ವಿಕೆಟ್‌‌ ಪಡೆಯುವುದರ ಜೊತೆಗೆ ಅಮೋಘ 70 ರನ್‌ ಸಿಡಿಸಿ ಅಜೇಯರಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಜಡೇಜಾ ಅವರು ಕೊಲೆಂಬೊ ಟೆಸ್ಟ್ ಪಂದ್ಯದಲ್ಲೇ ಟೆಸ್ಟ್ ವೃತ್ತಿ ಜೀವನದ 150ನೇ ವಿಕೆಟ್ ಕಬಳಿಸಿದ್ದರು. 32ನೇ ಪಂದ್ಯದಲ್ಲಿ ಜಡೇಜಾ ಈ ಸಾಧನೆ ಮಾಡಿದ್ದಾರೆ.

ಭಾರತದ ಅಶ್ವಿನ್‌‌‌ 418 ಅಂಕ ಪಡೆದು ಮೂರನೇ ಸ್ಥಾನ, ಶಕಿಬ್‌ ಅಲ್‌ ಹಸನ್‌ 431 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು, 438 ಅಂಕಗಳೊಂದಿಗೆ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ.