ರಣಜಿ ತಂಡದ ನಾಯಕತ್ವ ತ್ಯಜಿಸಿದ ಗೌತಮ್ ಗಂಭೀರ್

ರಣಜಿ ತಂಡದ ನಾಯಕತ್ವ ತ್ಯಜಿಸಿದ ಗೌತಮ್ ಗಂಭೀರ್

HSA   ¦    Nov 05, 2018 02:36:21 PM (IST)
ರಣಜಿ ತಂಡದ ನಾಯಕತ್ವ ತ್ಯಜಿಸಿದ ಗೌತಮ್ ಗಂಭೀರ್

ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಅವರು ದೆಹಲಿ ರಣಜಿ ತಂಡದ ನಾಯಕತ್ವ ತೊರೆಯುವುದಾಗಿ ಹೇಳಿದ್ದಾರೆ.

ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ. ಗಂಭೀರ್ ಅವರು ಹೊಸ ನಾಯಕನಿಗೆ ಬೆಂಬಲ ನೀಡುವುದಾಗಿ ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ)ಗೆ ತಿಳಿಸಿದ್ದಾರೆ.

ದೆಹಲಿ ರಣಜಿ ತಂಡದ ನಾಯಕನಾಗಿ ನಿತಿನ್ ರಾಣಾ ಮತ್ತು ಉಪನಾಯಕನಾಗಿ ಧ್ರುವ್ ಶೋರೆ ಅವರನ್ನು ಆಯ್ಕೆ ಮಾಡಿದೆ. ನ.12ರಿಂದ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ದೆಹಲಿ ರಣಜಿ ಋತುವನ್ನು ಆರಂಭಿಸಲಿದೆ.