ವಿವಿ ಮಟ್ಟದ ವಾಲಿಬಾಲ್ ಟೂರ್ನಿ: ಕೆ.ವಿ.ಜಿ ಮೆಡಿಕಲ್ ಕಾಲೇಜು, ಎ.ಜೆ.ಡೆಂಟಲ್ ಸೈನ್ಸ್ ತಂಡಗಳು ಫೈನಲ್‍ಗೆ

ವಿವಿ ಮಟ್ಟದ ವಾಲಿಬಾಲ್ ಟೂರ್ನಿ: ಕೆ.ವಿ.ಜಿ ಮೆಡಿಕಲ್ ಕಾಲೇಜು, ಎ.ಜೆ.ಡೆಂಟಲ್ ಸೈನ್ಸ್ ತಂಡಗಳು ಫೈನಲ್‍ಗೆ

GK   ¦    Mar 12, 2019 08:01:39 PM (IST)
ವಿವಿ ಮಟ್ಟದ ವಾಲಿಬಾಲ್ ಟೂರ್ನಿ: ಕೆ.ವಿ.ಜಿ ಮೆಡಿಕಲ್ ಕಾಲೇಜು, ಎ.ಜೆ.ಡೆಂಟಲ್ ಸೈನ್ಸ್ ತಂಡಗಳು ಫೈನಲ್‍ಗೆ

ಸುಳ್ಯ: ಸುಳ್ಯ ಕೆವಿಜಿ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ 2018-19 ನೇ ಸಾಲಿನ ರಾಜೀವ್‍ ಗಾಂಧಿ ವಿವಿ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ ಮತ್ತು ಎ.ಜೆ.ಡೆಂಟಲ್ ಸೈನ್ಸ್ ಕಾಲೇಜು ಮಂಗಳೂರು ತಂಡಗಳು ಮಹಿಳಾ ವಿಭಾಗದ ಫೈನಲ್ ಪ್ರವೇಶಿಸಿದೆ.

ಸೆಮಿಫೈನಲ್ ಪಂದ್ಯಾಟದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ತಂಡ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ತಂಡವನ್ನು ಪರಾಭವಗೊಳಿಸಿ(23-25, 25-11, 15-9) ಫೈನಲ್ ಪ್ರವೇಶಿಸಿದರೆ, ಎ.ಜೆ ಡೆಂಟಲ್ ಸೈನ್ಸ್ ಕಾಲೇಜು ತಂಡ ಬೆಂಗಳೂರಿನ ಆದಿತ್ಯ ಕಾಲೇಜ್ ಆಫ್ ನರ್ಸಿಂಗ್ ತಂಡವನ್ನು ನೇರ ಸೆಟ್‍ಗಳಿಂದ(25-14, 25-6) ಪರಾಭವಗೊಳಿಸಿ ಫೈನಲ್ ಪ್ರವೇಶಿಸಿತು.

ಪುರುಷರ ವಿಭಾಗದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ, ಶಿವಮೊಗ್ಗ ಮೆಡಿಕಲ್ ಕಾಲೇಜು, ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ಬೆಂಗಳೂರು, ಮೈಸೂರು ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ಮೈಸೂರು ತಂಡಗಳು ಸೆಮಿ ಫೈನಲ್‍ಗೆ ಪ್ರವೇಶ ಪಡೆಯಿತು.

ರಾಜ್ಯದ ಮೆಡಿಕಲ್, ಡೆಂಟಲ್, ಆಯುರ್ವೇದ, ನರ್ಸಿಂಗ್, ಫಾರ್ಮಸಿ ಕಾಲೇಜುಗಳ 38 ಪುರುಷ ಮತ್ತು 17 ಮಹಿಳಾ ತಂಡಗಳು ಭಾಗವಹಿಸಿವೆ.