ವಿವಿ ಮಟ್ಟದ ವಾಲಿಬಾಲ್ ಟೂರ್ನಿ: ಬೆಂಗಳೂರು ಮೆಡಿಕಲ್ ಕಾಲೇಜು, ಕೆ.ವಿ.ಜಿ ಮೆಡಿಕಲ್ ಕಾಲೇಜು ಚಾಂಪಿಯನ್

ವಿವಿ ಮಟ್ಟದ ವಾಲಿಬಾಲ್ ಟೂರ್ನಿ: ಬೆಂಗಳೂರು ಮೆಡಿಕಲ್ ಕಾಲೇಜು, ಕೆ.ವಿ.ಜಿ ಮೆಡಿಕಲ್ ಕಾಲೇಜು ಚಾಂಪಿಯನ್

GK   ¦    Mar 13, 2019 04:19:28 PM (IST)
ವಿವಿ ಮಟ್ಟದ ವಾಲಿಬಾಲ್ ಟೂರ್ನಿ: ಬೆಂಗಳೂರು ಮೆಡಿಕಲ್ ಕಾಲೇಜು, ಕೆ.ವಿ.ಜಿ ಮೆಡಿಕಲ್ ಕಾಲೇಜು ಚಾಂಪಿಯನ್

ಸುಳ್ಯ: ಸುಳ್ಯ ಕೆವಿಜಿ ಕ್ಯಾಂಪಸ್‍ನಲ್ಲಿ ನಡೆದ 2018-19ನೇ ಸಾಲಿನ ರಾಜೀವ್‍ ಗಾಂಧಿ ಆರೋಗ್ಯ ವಿವಿ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ಬೆಂಗಳೂರು ಮತ್ತು ಮಹಿಳಾ ವಿಭಾಗದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪುರುಷರ ವಿಭಾಗದಲ್ಲಿ ಶಿವಮೊಗ್ಗ ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ಮತ್ತು ಮಹಿಳಾ ವಿಭಾಗದಲ್ಲಿ ಎ.ಜೆ.ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜು ಮಂಗಳೂರು ತಂಡಗಳು ದ್ವಿತೀಯ ಸ್ಥಾನ ಪಡೆಯಿತು. ಪುರುಷ ವಿಭಾಗದ ಫೈನಲ್‍ನಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಬೆಂಗಳೂರು ಮೆಡಿಕಲ್ ಕಾಲೇಜು ತಂಡ ನೇರ ಸೆಟ್‍ಗಳಿಂದ(25-19,25-13) ಶಿವಮೊಗ್ಗ ಮೆಡಿಕಲ್ ಕಾಲೇಜು ತಂಡವನ್ನು ಪರಾಭವಗೊಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮಹಿಳಾ ವಿಭಾಗದ ಫೈನಲ್‍ನಲ್ಲಿ ಮೊದಲ ಸೆಟ್ ಕಳೆದುಕೊಂಡರೂ ಪ್ರೇಕ್ಷಕರ ಬೆಂಬಲದೊಂದಿಗೆ ಬಿರುಸಿನ ಆಟ ಪ್ರದರ್ಶಿಸಿದ ಕೆ.ವಿ.ಜಿ ಮೆಡಿಕಲ್ ಕಾಲೇಜು ತಂಡ ಎ.ಜೆ. ಡೆಂಟಲ್ ಸಯನ್ಸ್ ತಂಡವನ್ನು ಪರಾಭವಗೊಳಿಸಿ ಚಾಂಪಿಯನ್ ಆಯಿತು. ಮೊದಲ ಸೆಟ್ 25-22 ಅಂತರದಲ್ಲಿ ಎ.ಜೆ ತಂಡ ಗೆದ್ದುಕೊಂಡರೆ ಎರಡನೇ(25-16) ಮತ್ತು ಮೂರನೇ(15-9) ಸೆಟ್‍ನ್ನು ಗೆಲ್ಲುವ ಮೂಲಕ ಕೆ.ವಿ.ಜಿ ಚಾಂಪಿಯನ್ ಆಯಿತು.

ಪುರುಷರ ವಿಭಾಗದಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ಮೈಸೂರು ತಂಡ ತೃತೀಯ ಮತ್ತು ಕೆ.ವಿ.ಜಿ ಮೆಡಿಕಲ್ ಕಾಲೇಜು ಚತುರ್ಥ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್ ತಂಡ ತೃತೀಯ ಮತ್ತು ಬೆಂಗಳೂರಿನ ಆದಿತ್ಯ ಕಾಲೇಜ್ ಆಫ್ ನರ್ಸಿಂಗ್ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.

ರಾಜೀವ್‍ ಗಾಂಧಿ ಆರೋಗ್ಯ ವಿವಿ ಮಟ್ಟದ ಮೆಡಿಕಲ್, ಡೆಂಟಲ್, ಆಯುರ್ವೇದ, ನರ್ಸಿಂಗ್, ಫಾರ್ಮಸಿ ಕಾಲೇಜುಗಳ 38 ಪುರುಷ ಮತ್ತು 17 ಮಹಿಳಾ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.

ಪ್ರಶಸ್ತಿ ಪ್ರದಾನ
ವಾಲಿಬಾಲ್ ವಿಜೇತರಿಗೆ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್‍ನ ನಿರ್ದೇಶಕ ಕೆ.ಸಿ.ಅಕ್ಷಯ್, ಮೆಡಿಕಲ್ ಕಾಲೇಜಿನ ಡೀನ್ ಡಾ.ಸತ್ಯವತಿ.ಕೆ, ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಪ್ರಶಸ್ತಿ ವಿತರಿಸಿದರು. ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಕೆವಿಜಿ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ.ಲೀಲಾಧರ್, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಶೆಟ್ಟರ್, ದೊಡ್ಡಣ್ಣ ಬರೆಮೇಲು ಉಪಸ್ಥಿತರಿದ್ದರು.

More Images