ಸುಳ್ಯದಲ್ಲಿ ರಾಜ್ಯ ಮಟ್ಟದ ಲಗೋರಿ ಪಂದ್ಯಾಟ.

ಸುಳ್ಯದಲ್ಲಿ ರಾಜ್ಯ ಮಟ್ಟದ ಲಗೋರಿ ಪಂದ್ಯಾಟ.

GK   ¦    May 06, 2019 03:30:56 PM (IST)
ಸುಳ್ಯದಲ್ಲಿ ರಾಜ್ಯ ಮಟ್ಟದ ಲಗೋರಿ ಪಂದ್ಯಾಟ.

ಸುಳ್ಯ: ಜೂನ್ 8 ಮತ್ತು 9ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಲಗೋರಿ ಪಂದ್ಯಾಟ ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾ ಭವನದ ಮುಂಭಾಗದ ಸ.ಪ.ಪೂ.ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.

ದ ಕ ಜಿಲ್ಲಾ ಲಗೋರಿ ಅಸೋಸಿಯೇಷನ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ದ ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ 10 ಮತ್ತು ಕೊಡಗು ಹಾಸನ ಮೈಸೂರು ಚಿಕ್ಕಮಗಳೂರು ಬೆಂಗಳೂರು ಮಂಡ್ಯ ಜಿಲ್ಲೆಯ 6 ತಂಡಗಳು ಭಾಗವಹಿಸಲಿವೆ.

ಈ ಬಗ್ಗೆ ಸಂಘಟನಾ ಸಮಿತಿ ರಚಿಸಲಾಗಿದೆ. ದ.ಕ.ಜಿಲ್ಲಾ ಅಸೋಸಿಯೇಶನ್ ನ ಉಪಾಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚಿಸಲಾಯಿತು. ಜಿಲ್ಲಾ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಉಪಾಧ್ಯಕ್ಷ ಬಿ.ಕೆ.ಮಾಧವ ವಂದಿಸಿದರು. ಕೋಶಾಧಿಕಾರಿ ಸಂತೋಷ್ ಮಡ್ತಿಲ ಕಾರ್ಯಕ್ರಮ ನಿರೂಪಿಸಿದರು.

ಸಂಘಟನಾ ಸಮಿತಿ: ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ದೀಪಕ್ ಕುತ್ತಮೊಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಸ್.ಗಂಗಾಧರ, ಸಂಯೋಜಕರಾಗಿ ದಿನೇಶ್ ಮಡಪ್ಪಾಡಿ, ಕೋಶಾಧಿಕಾರಿಯಾಗಿ ನವೀನ್ ಕಜೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.