ದಶಕದ ಬಳಿಕ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ

ದಶಕದ ಬಳಿಕ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ

HSA   ¦    Jan 15, 2018 03:45:20 PM (IST)
ದಶಕದ ಬಳಿಕ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಕಪ್ತಾನನಾಗಿ ದ. ಆಫ್ರಿಕಾದಲ್ಲಿ ಶತಕ ಬಾರಿಸಿದ ದ್ವಿತೀಯ ಭಾರತೀಯ ಆಟಗಾರನಾದರು.

ಇದಕ್ಕೆ ಮೊದಲು ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸಿದ್ದರು. ಕೊಹ್ಲಿ ತನ್ನ 21ನೇ ಶತಕ ಬಾರಿಸಿ ಸಚಿನ್ ಬಳಿಕ ಈ ಸಾಧನೆಗೈದ ದ್ವಿತೀಯ ಆಟಗಾರನಾದರು.

1996-97ರ ಪ್ರವಾಸದಲ್ಲಿ ಸಚಿನ್ ಕೇಪ್ ಟೌನ್ ನಲ್ಲಿ 169 ರನ್ ಬಾರಿಸಿದ್ದರು. ಎರಡು ದಶಕಗಳ ಬಳಿಕ ಸಚಿನ್ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ಕೇವಲ 5 ಮತ್ತು 28 ರನ್ ಬಾರಿಸಿದ್ದ ಕೊಹ್ಲಿ ಎರಡನೇ ದಿನದಾಟದಂತ್ಯಕ್ಕೆ 85 ರನ್ ಬಾರಿಸಿ ಇಂದು ಮತ್ತೆ ತನ್ನ ಇನ್ನಿಂಗ್ಸ್ ಆರಂಭಿಸಿದರು.