ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಅಮಿತ್ ಪಂಗಲ್ ಗೆ ಸ್ವರ್ಣ

ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಅಮಿತ್ ಪಂಗಲ್ ಗೆ ಸ್ವರ್ಣ

HSA   ¦    Apr 26, 2019 03:03:27 PM (IST)
ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಅಮಿತ್ ಪಂಗಲ್ ಗೆ ಸ್ವರ್ಣ

ಬ್ಯಾಂಕಾಕ್: ಇಲ್ಲಿ ನಡೆಯುತ್ತಿರುವ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಮಿತ್ ಪಂಗಲ್ ಅವರು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

23ರ ಹರೆಯದ ಪಂಗಲ್ ಅವರು ದಕ್ಷಿಣ ಕೊರಿಯಾದ ಕಿಮ್ ಇನ್ಯು ಅವರನ್ನು 52 ಕೆಜಿ ಪುರುಷರ ಫ್ಲೈವೆಯ್ಡ್ ನಲ್ಲಿ ಸುಲಭವಾಗಿ ಪರಾಭವಗೊಳಿಸಿದರು.

ಈ ಸ್ವರ್ಣದೊಂದಿಗೆ ಪಂಗಲ್ ಅವರು ಈ ವರ್ಷದಲ್ಲಿ ಎರಡನೇ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಇದಕ್ಕೆ ಮೊದಲು ಅವರು ಫೆಬ್ರವರಿಯಲ್ಲಿ ಸ್ಟ್ರಾಂಡ್ಜ ಸ್ಮಾರಕ ಟೂರ್ನಮೆಂಡ್ ನಲ್ಲಿ ಕೂಡ ಸ್ವರ್ಣ ಪದಕ ಗೆದ್ದಿದ್ದರು.

49 ಕೆಜಿಯಿಂದ 52 ಕೆಜಿಗೆ ವರ್ಗಾವಣೆಗೊಂಡ ಬಳಿಕ ಪಂಗಲ್ ಅವರಿಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಗಿದೆ.