ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಬೇಸರ ವ್ಯಕ್ತಪಡಿಸಿದ ರೋಹಿತ್ ಶರ್ಮಾ

ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಬೇಸರ ವ್ಯಕ್ತಪಡಿಸಿದ ರೋಹಿತ್ ಶರ್ಮಾ

HSA   ¦    Jul 12, 2019 04:58:16 PM (IST)
ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಬೇಸರ ವ್ಯಕ್ತಪಡಿಸಿದ ರೋಹಿತ್ ಶರ್ಮಾ

ನವದೆಹಲಿ: ವಿಶ್ವಕಪ್ ಟೂರ್ನಮೆಂಟ್ ನ ಸೆಮಿಫೈನಲಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡಿರುವ ಬಗ್ಗೆ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದಿರುವ ರೋಹಿತ್, ಅಗತ್ಯವೆಂದು ಅನಿಸಿದಾಗ ನಾವು ತಂಡವಾಗಿ ಪ್ರದರ್ಶನ ನೀಡಲು ವಿಫಲರಾದೆವು. 30 ನಿಮಿಷಗಳ ಕೆಟ್ಟ ಆಟವು ವಿಶ್ವಕಪ್ ನಿಂದ ತಂಡವನ್ನು ಹೊರದಬ್ಬಿದೆ ಎಂದು ಟ್ವೀಟ್ ಮಾಡಿದ್ದಾರೆ.

ರೋಹಿತ್ ಶರ್ಮಾ ವಿಶ್ವಕಪ್ ನಲ್ಲಿ ಐದು ಶತಕ ಬಾರಿಸಿ ದಾಖಲೆ ಮಾಡಿದ್ದಾರೆ. ಈ ಟೂರ್ನಮೆಂಟ್ ನಲ್ಲಿ ಕೂಡ ಗರಿಷ್ಠ ರನ್ ಮಾಡಿರುವ ದಾಖಲೆ ಹೊಂದಿರುವರು.

ರೋಹಿತ್ ಈ ಟೂರ್ನಿಯಲ್ಲಿ 648 ರನ್ ಬಾರಿಸಿದ್ದಾರೆ. 81ರ ಸರಾಸರಿಯಲ್ಲಿ ಅವರು ಈ ರನ್ ದಾಖಲಿಸಿಕೊಂಡಿದ್ದಾರೆ.