ದ್ವಿತೀಯ ಟೆಸ್ಟ್: ಮೊದಲ ದಿನ ಭಾರತ-ಆಸೀಸ್ ಸಮಾನ ಗೌರವ

ದ್ವಿತೀಯ ಟೆಸ್ಟ್: ಮೊದಲ ದಿನ ಭಾರತ-ಆಸೀಸ್ ಸಮಾನ ಗೌರವ

HSA   ¦    Dec 14, 2018 03:36:26 PM (IST)
ದ್ವಿತೀಯ ಟೆಸ್ಟ್: ಮೊದಲ ದಿನ ಭಾರತ-ಆಸೀಸ್ ಸಮಾನ ಗೌರವ

ಪರ್ತ್: ಎಚ್ಚರಿಕೆ ಆರಂಭವನ್ನು ಪಡೆದಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಬೌಲರ್ ಗಳು ಆಘಾತ ನೀಡಿದ್ದು, ಎರಡನೇ ಟೆಸ್ಟ್ ನ ಮೊದಲ ದಿನದಾಟದಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 277 ರನ್ ಮಾಡಿದೆ.

ಮಾರ್ಕಸ್ ಹ್ಯಾರಿಸ್(70) ಮತ್ತು ಅರೋನ್ ಪಿಂಚ್(50) ಕ್ರಮವಾಗಿ ಅರ್ಧಶತಕ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಇವರಿಬ್ಬರ ಪತನದ ಬಳಿಕ ಭಾರತದ ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡಿ ಆತಿಥೇಯ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿಹಾಕಿದರು. ಟ್ರಾವಿಸ್ ಹೆಡ್ 58 ರನ್ ಮಾಡಿ ತಂಡಕ್ಕೆ ಆಧಾರವಾದರು.

ಆರ್. ಅಶ್ವಿನಿ ಬದಲಿಗೆ ಆಡಿರುವ ಹನುಮ ವಿಹಾರಿ 2 ಮತ್ತು ವೇಗಿ ಇಶಾಂತ್ ಶರ್ಮಾ 2 ವಿಕೆಟ್ ಕಬಳಿಸಿ ಆಸೀಸ್ ಗೆ ಆಘಾತವಿಕ್ಕಿದರು.