ಅಂತಾರಾಷ್ಟ್ರೀಯ ಕ್ರಿಕೆಟಿಗೆ ಯುವರಾಜ್ ಸಿಂಗ್ ವಿದಾಯ

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಯುವರಾಜ್ ಸಿಂಗ್ ವಿದಾಯ

HSA   ¦    Jun 10, 2019 03:46:33 PM (IST)
ಅಂತಾರಾಷ್ಟ್ರೀಯ ಕ್ರಿಕೆಟಿಗೆ ಯುವರಾಜ್ ಸಿಂಗ್ ವಿದಾಯ

ಮುಂಬಯಿ: ಸಿಕ್ಸರ್ ಗಳ ಸುರಿಮಳೆಗೈದು, ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾದ ಆಟಗಾರ ಯುವರಾಜ್ ಸಿಂಗ್ ಅವರು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.

ನನ್ನದು ಅದ್ಭುತ ಪಯಣ. ಈಗ ಅದನ್ನು ಕೊನೆಗೊಳಿಸುವ ಸಮಯ ಬಂದಿದೆ. ನಾನು ಹತ್ತು ಸಾವಿರ ರನ್ ಗಳಿಸಬೇಕೆಂದು ಬಯಸಿರಲಿಲ್ಲ. ವಿಶ್ವಕಪ್ ಗೆಲ್ಲುವುದು ನನ್ನ ಗುರಿಯಾಗಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡದಿರುವುದಕ್ಕೆ ಬೇಸರವಿದೆ. ಆದರೆ ಇನ್ನೂ 40 ಟೆಸ್ಟ್ ನಲ್ಲಿ ಅವಕಾಶ ಸಿಕ್ಕಿದ್ದರೆ ದಾಖಲೆಗಳು ಬೇರೆಯೇ ಮಾತನಾಡುತ್ತಿದ್ದವು ಎಂದರು.

ಯುವರಾಜ್ ಸಿಂಗ್ ಅವರು 2000ನೇ ಇಸವಿಯಲ್ಲಿ ಕೀನ್ಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. 37ರ ಹರೆಯದ ಯುವಿ ಇದುವರೆಗೆ 304 ಏಕದಿನ ಪಂದ್ಯಗಳಲ್ಲಿ 8.701 ರನ್ ಗಳಿಸಿ, 14 ಶತಕ ಬಾರಿಸಿದ್ದಾರೆ. 40 ಟೆಸ್ಟ್ ಗಳಲ್ಲಿ ಅವರು 1900 ರನ್ ಮಾಡಿದ್ದಾರೆ. 58 ಟಿ-20 ಪಂದ್ಯಗಳಲ್ಲಿ 1177 ರನ್ ಗಳಿಸಿರುವರು.