ನಾನೇ ವಿಶ್ರಾಂತಿ ಬೇಕೆಂದು ಕೇಳಿದ್ದೆ: ಹಾರ್ದಿಕ್ ಪಾಂಡ್ಯ

ನಾನೇ ವಿಶ್ರಾಂತಿ ಬೇಕೆಂದು ಕೇಳಿದ್ದೆ: ಹಾರ್ದಿಕ್ ಪಾಂಡ್ಯ

Nov 14, 2017 09:57:44 AM (IST)
ನಾನೇ ವಿಶ್ರಾಂತಿ ಬೇಕೆಂದು ಕೇಳಿದ್ದೆ: ಹಾರ್ದಿಕ್ ಪಾಂಡ್ಯ

ನವದೆಹಲಿ: ಶೇಕಡಾ ನೂರರಷ್ಟು ಫಿಟ್ ಇರದೇ ಇದ್ದ ಕಾರಣ ತಂಡದ ಆಡಳಿತದಿಂದ ವಿಶ್ರಾಂತಿಗೆ ಮನವಿ ಮಾಡಿಕೊಂಡಿದ್ದೆ ಎಂದು ಶ್ರೀಲಂಕಾ ವಿರುದ್ಧದ ಮೊದಲು ಎರಡು ಟೆಸ್ಟ್ ಗಳಿಗೆ ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಪಾಂಡ್ಯನನ್ನು ಮೊದಲು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದರ ಬಳಿಕ ವಿಶ್ರಾಂತಿ ನೀಡಲಾಗಿತ್ತು. ಇದು ಬಳಲಿಕೆಯಾ ಅಥವಾ ಗಾಯಾಳು ಸಮಸ್ಯೆಯಾ ಎನ್ನುವುದು ಬಿಸಿಸಿಐಗೆ ಕೂಡ ಸ್ಪಷ್ಟತೆಯಿಲ್ಲ.

ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ವಿಶ್ರಾಂತಿ ಕೇಳಿದ್ದೆ. ನನ್ನ ದೇಹ ಇದಕ್ಕೆ ತಯಾರಾಗಿರಲಿಲ್ಲ. ನಾನು ಆಡುತ್ತಿರುವ ಹೆಚ್ಚಿನ ಕ್ರಿಕೆಟಿನಿಂದಾಗಿ ದೇಹಕ್ಕೆ ಆಯಾಸವಾಗಿದೆ. ಸಂಪೂರ್ಣವಾಗಿ ಫಿಟ್ ಇದ್ದು, ಶೇಕಡಾ ನೂರರಷ್ಟು ನನ್ನ ನನ್ನ ಪ್ರದರ್ಶನ ನೀಡಲು ಸಿದ್ಧನಿದ್ದಾಗ ನಾನು ಆಡುತ್ತೇನೆ ಎಂದು ಪಾಂಡ್ಯ ಹೇಳಿದರು.
ನನಗೆ ಈ ವಿಶ್ರಾಂತಿ ಸಿಕ್ಕಿರುವುದು ತುಂಬಾ ಸಂತಸವಾಗಿದೆ. ಈ ಸಮಯವನ್ನು ನಾನು ಜಿಮ್ ಮತ್ತು ಫಿಟ್ನೆಸ್ ಮರಳಿ ಪಡೆಯಲು ಬಳಸುತ್ತೇನೆ. ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಹೆಚ್ಚು ಕಾತರನಾಗಿದ್ದೇನೆ ಎಂದು ಎನ್ ಸಿಎಯಲ್ಲಿ ತರಬೇತಿಗೆ ಬಂದಿರುವ ಪಾಂಡ್ಯ ತಿಳಿಸಿದರು.