ಆಳ್ವಾಸ್ ಕ್ರಿಕೆಟ್ ತಂಡಕ್ಕೆ ಲೆಸ್ಲಿ ಡಿಸೋಜಾ ಮೆಮೋರಿಯಲ್ ಟ್ರೋಫಿ

ಆಳ್ವಾಸ್ ಕ್ರಿಕೆಟ್ ತಂಡಕ್ಕೆ ಲೆಸ್ಲಿ ಡಿಸೋಜಾ ಮೆಮೋರಿಯಲ್ ಟ್ರೋಫಿ

YK   ¦    Mar 12, 2018 11:15:12 AM (IST)
ಆಳ್ವಾಸ್ ಕ್ರಿಕೆಟ್ ತಂಡಕ್ಕೆ ಲೆಸ್ಲಿ ಡಿಸೋಜಾ ಮೆಮೋರಿಯಲ್ ಟ್ರೋಫಿ

ಮೂಡುಬಿದಿರೆ: ಮ0ಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಇವರ ಜ0ಟಿ ಆಶ್ರಯದಲ್ಲಿ ಆಯೋಜಿಸಿರುವ 2017-18 ನೇ ಸಾಲಿನ ಪುರುಷರ ಉಡುಪಿ ಅ0ತರ್ ಕಾಲೇಜು ಕ್ರಿಕೆಟ್ ಪ0ದ್ಯಾಟದಲ್ಲಿ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ.

ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ದ್ವಿತೀಯ ಸ್ಥಾನವನ್ನು ಪಡೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಳ್ವಾಸ್ ತಂಡವು 50 ಒವೆರ್ ಗಳಲ್ಲಿ 8 ವಿಕೆಟ್ ಗಳಲ್ಲಿ 287 ರನ್ ಗಳಿಸಿತು. ಆಳ್ವಾಸ್ ಪರ ಮನೋಜ್ ಎಮ್ 120, ಪವನ್ ಜೆ ಗೊಕಲೆ 54 ರನ್ ಗಳನ್ನು ಗಳಿಸಿದರು.

ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮವರ ಪರ ಸುಧೀರ್ 4, ಪ್ರದೀಪ್ 2 ವಿಕೆಟ್ ಪಡೆದಿದ್ದಾರೆ. ನಂತರ ಬ್ಯಾಟಿಂಗ್ ಮಾಡಿದ ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ತಂಡವು 96 ರನ್ ಗೆ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ತಂಡದ ಪರ ಅಭಿಶೇಕ್ 27, ಅಶಿಕ್ 19 ರನ್ ಗಳನ್ನು ಗಳಿಸಿದರು. ಆಳ್ವಾಸ್ ಪರ ಪವನ್ 5, ಯಶ್ವಿತ್ 3 ವಿಕೆಟ್‍ಗಳನ್ನು ಪಡೆದರು. ಆಳ್ವಾಸ್ ಕಾಲೇಜು ತಂಡವು 191 ರನ್ ಗಳೊಂದಿಗೆ ಲೆಸ್ಲಿ ಡಿಸೋಜಾ ಮೆಮೋರಿಯಲ್ ಟ್ರೋಪಿಯನ್ನು ತನ್ನದಾಗಿಸಿತು.

ಬೆಸ್ಟ್ ಬಾಟ್ಸ್ ಮ್ಯಾನ್ ಮನೋಜ್ ಎಮ್ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಪವನ್ ಜೆ ಗೋಖಲೆ ಪಡೆದಿದ್ದಾರೆ. ಎನ್.ಐ.ಟಿ.ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ಶಿವರಾಮ್.ಎ, ಪಂದ್ಯಾಟದ ವೀಕ್ಷಣೆಗಾರರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ದಿವಾಕರ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಕೆಂಪರಾಜ್ ಎಚ್.ಬಿ, ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ತಿಲಕ್ ಶೆಟ್ಟಿ, ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಅವಿನ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಟಿ.ಎಸ್ ಹಾಗೂ ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ಪ್ರಾಧ್ಯಾಪಕ ಅಶ್ವಿನ್ ಶೆಟ್ಟಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು.