ಮಲೇಷ್ಯಾ ಓಪನ್: ಸೈನಾ ನೆಹ್ವಾಲ್ ಪ್ರಶಸ್ತಿ ಕನಸು ಭಗ್ನ

ಮಲೇಷ್ಯಾ ಓಪನ್: ಸೈನಾ ನೆಹ್ವಾಲ್ ಪ್ರಶಸ್ತಿ ಕನಸು ಭಗ್ನ

HSA   ¦    Jan 19, 2019 02:04:13 PM (IST)
ಮಲೇಷ್ಯಾ ಓಪನ್: ಸೈನಾ ನೆಹ್ವಾಲ್ ಪ್ರಶಸ್ತಿ ಕನಸು ಭಗ್ನ

ಕೌಲಲಾಂಪುರ: ಭಾರತದ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲಿನಲ್ಲಿ ಸ್ಪೇನ್ ನ ಕ್ಯಾರೋಲಿನ್ ಮರಿನ್ ವಿರುದ್ಧ ಸೋಲುಂಡಿದ್ದು, ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಏಳನೇ ಶ್ರೇಯಾಂಕದ ಸೈನಾ ನಾಲ್ಕನೇ ಶ್ರೇಯಾಂಕದ ಕ್ಯಾರೋಲಿನ್ ಮರಿನ್ ವಿರುದ್ಧ 16-21, 13-21ರಿಂದ ಸೋಲುಂಡರು.

ಕ್ವಾರ್ಟರ್ ಫೈನಲಿನಲ್ಲಿ ಸೈನಾ ನೊಜೊಮಿ ಒಕುಹರಾ ವಿರುದ್ಧ 21-18, 23-21ರಿಂದ ಗೆಲುವು ದಾಖಲಿಸಿಕೊಂಡು ಸೆಮಿಫೈನಲಿಗೆ ತಲುಪಿದ್ದರು.