ಟ್ಯೂನೀಶಿಯಾ ವಿರುದ್ಧ ಇಂಗ್ಲೆಂಡ್ 2-1ರ ಗೆಲುವು

ಟ್ಯೂನೀಶಿಯಾ ವಿರುದ್ಧ ಇಂಗ್ಲೆಂಡ್ 2-1ರ ಗೆಲುವು

HSA   ¦    Jun 19, 2018 01:57:27 PM (IST)
ಟ್ಯೂನೀಶಿಯಾ ವಿರುದ್ಧ ಇಂಗ್ಲೆಂಡ್ 2-1ರ ಗೆಲುವು

ವೊಲ್ಗೊರ್ಗಡ್: ಕಪ್ತಾನ ಹ್ಯಾರಿ ಕೇನ್ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಇಂಗ್ಲೆಂಡ್ ಫಿಫಾ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟ್ಯೂನೀಶಿಯಾ ವಿರುದ್ಧ 2-1ರ ಗೆಲುವು ದಾಖಲಿಸಿಕೊಂಡಿದೆ.

ಡ್ರಾಗೊಳ್ಳುವತ್ತ ಸಾಗುತ್ತಿದ್ದ ಪಂದ್ಯದ 91ನೇ ನಿಮಿಷದಲ್ಲಿ ಗೋಲು ಬಾರಿಸಿದ ಕೇನ್ ಇಂಗ್ಲೆಂಡ್ ಗೆ ಗೆಲುವಿನ ಶುಭಾರಂಭ ಕೊಟ್ಟರು.

11ನೇ ನಿಮಿಷದಲ್ಲಿ ಕೇನ್ ಇಂಗ್ಲೆಂಡ್ ಗೆ ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ ಇದರ ಬಳಿಕ ಫೆರ್ಜಾನಿ ಸಾಸ್ಸಿ ಗೋಲು ಬಾರಿಸಿ ಟ್ಯುನೀಶಿಯಾಗೆ ಸಮಬಲ ಒದಗಿಸಿಕೊಟ್ಟರು.

ಇದರ ಬಳಿಕ ಕೊನೇ ಹಂತದವರೆಗೂ ಪಂದ್ಯವು ಡ್ರಾಗೊಳ್ಳುವ ಸಾಧ್ಯತೆಯು ಹೆಚ್ಚಾಗಿತ್ತು. ಆದರೆ ಹೆಚ್ಚುವರಿ ನಿಮಿಷದಲ್ಲಿ ಗೋಲು ಬಾರಿಸಿದ ಇಂಗ್ಲೆಂಡ್ ಕಪ್ತಾನ ಭರವಸೆ ಮೂಡಿಸಿದರು.