ದ. ಆಫ್ರಿಕಾದಲ್ಲಿ ರೋಹಿತ್ ಯಶಸ್ವಿಯಾಗಲ್ಲ: ಕೆಪ್ಲರ್ ವೆಸ್ಸೆಲ್ಸ್

ದ. ಆಫ್ರಿಕಾದಲ್ಲಿ ರೋಹಿತ್ ಯಶಸ್ವಿಯಾಗಲ್ಲ: ಕೆಪ್ಲರ್ ವೆಸ್ಸೆಲ್ಸ್

HSA   ¦    Feb 12, 2018 05:06:24 PM (IST)
ದ. ಆಫ್ರಿಕಾದಲ್ಲಿ ರೋಹಿತ್ ಯಶಸ್ವಿಯಾಗಲ್ಲ: ಕೆಪ್ಲರ್ ವೆಸ್ಸೆಲ್ಸ್

ಜೋಹನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲವೆಂದು ದಕ್ಷಿಣ ಆಫ್ರಿಕಾದ ಮಾಜಿ ಕಪ್ತಾನ ಕೆಪ್ಲರ್ ವೆಸ್ಸೆಲ್ಸ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ ಏಕದಿನ ಸರಣಿಯ ನಾಲ್ಕು ಪಂದ್ಯಗಳಲ್ಲಿ 20, 15, 0 ಮತ್ತು 5 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಸಲ ಅವರು ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್ ಎರಡು ಟೆಸ್ಟ್ ಗಳ ನಾಲ್ಕು ಇನ್ನಿಂಗ್ಸ್ ನಲ್ಲಿ 11, 10, 10, ಮತ್ತು 47 ರನ್ ಮಾಡಿದ್ದರು. ಇಲ್ಲೂ ಅವರು ಮೂರು ಸಲ ರಬಾಡಗೆ ವಿಕೆಟ್ ತೆತ್ತಿದ್ದರು.

ರೋಹಿತ್ ಶರ್ಮಾ ತನ್ನ ಫುಟ್ ವರ್ಕ್ ನಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ತೊಂದರೆಗೆ ಸಿಲುಕುತ್ತಿದ್ದಾರೆ. ಇಲ್ಲಿನ ಪಿಚ್ ಗಳು ವೇಗ ಹಾಗೂ ಬೌನ್ಸ್ ನೀಡುವ ಕಾರಣದಿಂದ ಅವರು ವಿಫಲರಾಗುತ್ತಿದ್ದಾರೆ ಎಂದು ವೆಸೆಲ್ ತಿಳಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ಅಲ್ಲಿ ಕೇವಲ ಬೌನ್ಸ್ ಆಗುತ್ತದೆ ಮತ್ತು ವೇಗವಿರುವುದಿಲ್ಲ. ಆದರೆ ವೇಗ ಮತ್ತು ಬೌನ್ಸ್ ಇದ್ದಾಗ ರೋಹಿತ್ ಬ್ಯಾಟಿಂಗ್ ಟೆಕ್ನಿಕ್ ಕೆಲಸ ಮಾಡುವುದಿಲ್ಲವೆಂದರು.