ವಿವಿ ಪುರುಷರ ಖೋ ಖೋ: ಆಳ್ವಾಸ್ ಗೆ ಸತತ 11ನೇ ಬಾರಿಗೆ ಪ್ರಶಸ್ತಿ

ವಿವಿ ಪುರುಷರ ಖೋ ಖೋ: ಆಳ್ವಾಸ್ ಗೆ ಸತತ 11ನೇ ಬಾರಿಗೆ ಪ್ರಶಸ್ತಿ

YK   ¦    Jan 11, 2018 11:41:26 AM (IST)
ವಿವಿ ಪುರುಷರ ಖೋ ಖೋ: ಆಳ್ವಾಸ್ ಗೆ  ಸತತ 11ನೇ ಬಾರಿಗೆ ಪ್ರಶಸ್ತಿ

ಮೂಡುಬಿದಿರೆ: ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಜ.4 ಹಾಗೂ 5ರಂದು ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಖೋ ಖೋ ಸ್ಪರ್ಧೆಯಲ್ಲಿ ಆಳ್ವಾಸ್ ಜಯಗಳಿಸುವುದರೊಂದಿಗೆ ಸತತ 11ನೇ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಫೈನಲ್ನಲ್ಲಿ ಆಳ್ವಾಸ್ ಬಿ.ಪಿ.ಎಡ್. ಕಾಲೇಜು ತಂಡವನ್ನು ಇನ್ನಿಂಗ್ಸ್ ಹಾಗೂ 04 ಅಂಕಗಳಿಂದ ಸೋಲಿಸಿ ಸತತ 11ನೇ ಬಾರಿಗೆ ಪ್ರಶಸ್ತಿ ಪಡೆದುಕೊಂಡಿದೆ. ಆಳ್ವಾಸ್ನ ಧನುಷ್ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.