ಗಾಯಾಳು ಶಮಿ ಬದಲಿಗೆ ನವದೀಪ್ ಸೈನಿ

ಗಾಯಾಳು ಶಮಿ ಬದಲಿಗೆ ನವದೀಪ್ ಸೈನಿ

HSA   ¦    Jun 11, 2018 07:35:00 PM (IST)
ಗಾಯಾಳು ಶಮಿ ಬದಲಿಗೆ ನವದೀಪ್ ಸೈನಿ

ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡಲು ವೇಗಿ ಮೊಹಮ್ಮದ್ ಶಮಿ ಅಲಭ್ಯರಾಗಿದ್ದು, ಹರ್ಯಾಣದ ಯುವ ವೇಗಿ ನವದೀಪ್ ಸೈನಿ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಗರದ ಎನ್ ಸಿಎಯಲ್ಲಿ ನಡೆದ ಫಿಟ್ ನೆಸ್ ಟೆಸ್ಟ್ ನಲ್ಲಿ ಶಮಿ ವಿಫಲರಾದ ಹಿನ್ನೆಲೆಯಲ್ಲಿ 25 ಹರೆಯದ ಸೈನಿಯನ್ನು ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿಯು ನಿರ್ಧರಿಸಿದೆ.

ದೇಶೀಯ ಟೂರ್ನಿಗಳಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿರುವ ಸೈನಿ ಎಂಟು ರಣಜಿ ಪಂದ್ಯಗಳಲ್ಲಿ 34 ವಿಕೆಟ್ ಗಳನ್ನು ಕಬಳಿಸಿದ್ದಾರೆ.

ಭಾರತ ಎ ತಂಡದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ರಜನೀಶ್ ಗುರ್ಬಾನಿ ಕೂಡ ತರಬೇತಿಯಲ್ಲಿ ಭಾಗಿಯಾಗುವಂತೆ ತಂಡದ ಆಡಳಿತವು ಕೇಳಿಕೊಂಡಿದೆ.