ಪಂಜ ಕುಸ್ತಿಯಲ್ಲಿ ಮೂವರಿಗೆ ಪ್ರಶಸ್ತಿ

ಪಂಜ ಕುಸ್ತಿಯಲ್ಲಿ ಮೂವರಿಗೆ ಪ್ರಶಸ್ತಿ

LK   ¦    Aug 11, 2017 04:18:43 PM (IST)
ಪಂಜ ಕುಸ್ತಿಯಲ್ಲಿ ಮೂವರಿಗೆ ಪ್ರಶಸ್ತಿ

ಚಿಕ್ಕಮಗಳೂರು: ಕರ್ನಾಟಕ ಪಂಜ ಕುಸ್ತಿ ಸಂಘ ಹಾಗೂ ದಾವಣಗೆರೆ ಜಿಲ್ಲಾ ಪಂಜಕುಸ್ತಿ ಸಂಘದ ವತಿಯಿಂದ ರಾಜ್ಯಮಟ್ಟದ ಎರಡನೇ ಬಾರಿಗೆ ನಡೆದ ಹರಿಹರ ತಾಲ್ಲೂಕಿನ ಪಂಜ ಕುಸ್ತಿಯಲ್ಲಿ ಜಿಲ್ಲೆಯ ಮೂವರು ಯುವಕರು ಪ್ರಶಸ್ತಿ ಹಾಗೂ ಪಾರಿತೋಷಕ ಪಡೆದು ವಿಜಯ ಸಾಧಿಸಿದ್ದಾರೆ. ಪುರುಷರ 85 ಕೆಜಿ ವಿಭಾಗದಲ್ಲಿ ಎಸ್.ಮಂಜುನಾಥ್ ದ್ವಿತೀಯ ಸ್ಥಾನ ಪಡೆದಿದ್ದು, 65 ಕೆಜಿ ವಿಭಾಗದಲ್ಲಿ ಫಾರೂಕ್ ಹಾಗೂ 55 ಕೆಜಿ ವಿಭಾಗದಲ್ಲಿ ಕೆ.ಟಿ.ಈಶ್ವರ್ 4ನೇ ಸ್ಥಾನ ಪಡೆಯುವ ಮೂಲಕ ರಾಣಿಬೆನ್ನೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂಜಕುಸ್ತಿಗೆ ತೆರಳಲಿದ್ದಾರೆ. ಇವರ ಕುಸ್ತಿಯ ತರಬೇತಿಯನ್ನು ತೇಗೂರಿನ ಟಿ.ಸಿ.ಈಶ್ವರ್ರಾಜ್ ಅರಸ್ ನೀಡಿ ಪ್ರೋತ್ಸಾಹಿಸಿದ್ದಾರೆ.