ರೋಹಿತ್ ಹೀಗೆ ಆಡಿದರೆ ನಮಗೆ ಪ್ರತೀ ಟೆಸ್ಟ್ ನಲ್ಲೂ ಗೆಲುವು: ಕೊಹ್ಲಿ

ರೋಹಿತ್ ಹೀಗೆ ಆಡಿದರೆ ನಮಗೆ ಪ್ರತೀ ಟೆಸ್ಟ್ ನಲ್ಲೂ ಗೆಲುವು: ಕೊಹ್ಲಿ

HSA   ¦    Oct 09, 2019 05:37:27 PM (IST)
ರೋಹಿತ್ ಹೀಗೆ ಆಡಿದರೆ ನಮಗೆ ಪ್ರತೀ ಟೆಸ್ಟ್ ನಲ್ಲೂ ಗೆಲುವು: ಕೊಹ್ಲಿ

ಪುಣೆ: ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ತನ್ನ ಬ್ಯಾಟಿಂಗ್ ನ್ನು ಎಂಜಾಯ್ ಮಾಡಲು ಬಿಟ್ಟರೆ ಆಗ ಟೆಸ್ಟ್ ಮಾತ್ರವಲ್ಲದೆ, ಬೇರೆ ವಿಧದ ಕ್ರಿಕೆಟಿನಲ್ಲೂ ತಂಡಕ್ಕೆ ಹೆಚ್ಚಿನ ಗೆಲುವು ಸಿಗಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಅವರಂತಹ ಆಟಗಾರ ಅಗ್ರ ಕ್ರಮಾಂಕದಲ್ಲಿ ಹೋಗಿ ಈ ರೀತಿಯಾಗಿ ಆಡಿದರೆ ನಾವು ಪ್ರತಿಯೊಂದು ಟೆಸ್ಟ್ ನಲ್ಲೂ ಗೆಲುವನ್ನು ಪಡೆಯಬಹುದಾಗಿದೆ ಎಂದು ವಿರಾಟ್ ತಿಳಿಸಿದರು.

ರೋಹಿತ್ ಅಗ್ರ ಕ್ರಮಾಂಕದಲ್ಲಿ ಹೋಗಿ ಆಡುವುದನ್ನು ನೋಡಲು ನಾವೆಲ್ಲರೂ ಇಷ್ಟಪಡುತ್ತೇವೆ ಎಂದು ವಿರಾಟ್ ಹೇಳಿದರು.

ವಿಶಾಖಪಟ್ಟಣಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ರೋಹಿತ್ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದರು.