ಎಪ್ರಿಲ್ 15ರ ತನಕ ಐಪಿಎಲ್ ಪಂದ್ಯಗಳು ಮುಂದೂಡಿಕೆ

ಎಪ್ರಿಲ್ 15ರ ತನಕ ಐಪಿಎಲ್ ಪಂದ್ಯಗಳು ಮುಂದೂಡಿಕೆ

HSA   ¦    Mar 13, 2020 03:20:28 PM (IST)
ಎಪ್ರಿಲ್ 15ರ ತನಕ ಐಪಿಎಲ್ ಪಂದ್ಯಗಳು ಮುಂದೂಡಿಕೆ

ಮುಂಬಯಿ: ಕೊರೋನಾ ಭೀತಿಯಿಂದಾಗಿ ಎಪ್ರಿಲ್ 15ರ ತನಕ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿದೆ.

ಮಾರ್ಚ್ 29ರಂದು ಐಪಿಎಲ್ ಪಂದ್ಯಗಳು ಆರಂಭವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರವು ಸಾರ್ವಜನಿಕವಾಗಿ ಸಾವಿರಾರು ಮಂದಿ ಸೇರುವುದನ್ನು ನಿರ್ಬಂಧ ಹೇರಿರುವ ಕಾರಣದಿಂದಾಗಿ ಐಪಿಎಲ್ ಆರಂಭ ಮುಂದೂಡಲಾಗಿದೆ.

ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಐಪಿಎಲ್ ನ ಪಂದ್ಯಗಳನ್ನು ಮುಂದೂಡಲಾಗಿದೆ. ಎಪ್ರಿಲ್ 15ರ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.