ಆರಂಭಿಕನಾಗಿ ಅತೀ ವೇಗವಾಗಿ ಏಳು ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

ಆರಂಭಿಕನಾಗಿ ಅತೀ ವೇಗವಾಗಿ ಏಳು ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

HSA   ¦    Jan 17, 2020 08:25:54 PM (IST)
ಆರಂಭಿಕನಾಗಿ ಅತೀ ವೇಗವಾಗಿ ಏಳು ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

ರಾಜ್ ಕೋಟ್: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟಿನಲ್ಲಿ ಆರಂಭಿಕನಾಗಿ ವೇಗವಾಗಿ ಏಳು ಸಾವಿರ ರನ್ ಪೂರೈಸಿದ ದಾಖಲೆ ಮಾಡಿದರು.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದಾರೆ. ಈ ವೇಳೆ ಅವರು ಹಶಿಮ್ ಆಮ್ಲಾ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್ 137 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆಮ್ಲಾ 147 ಇನ್ನಿಂಗ್ಸ್ ನಲ್ಲಿ ಏಳು ಸಾವಿರ ರನ್ ಮಾಡಿದ್ದರು ಮತ್ತು ಸಚಿನ್ ತೆಂಡೂಲ್ಕರ್ ಅವರು 160 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿರುವರು.

ಏಕದಿನದಲ್ಲಿ ಏಳು ಸಾವಿರ ರನ್ ಪೂರೈಸಿದ ನಾಲ್ಕನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಯು ರೋಹಿತ್ ಪಾಲಾಗಿದೆ. ಇದಕ್ಕೆ ಮೊದಲು ಸಚಿನ್, ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೇವಾಗ್ ಈ ಸಾಧನೆ ಮಾಡಿದ್ದಾರೆ.

ರೋಹಿತ್ ಎರಡನೇ ಏಕದಿನದಲ್ಲಿ 44 ಎಸೆತಗಳಲ್ಲಿ 42 ರನ್ ಮಾಡಿ ಆಡಂ ಜಂಪಾಗೆ ವಿಕೆಟ್ ಒಪ್ಪಿಸಿದರು.