ಫುಝೊವು ಓಪನ್: ಮೊದಲ ಸುತ್ತಲ್ಲೇ ನಿರ್ಗಮಿಸಿದ ಸೈನಾ ನೆಹ್ವಾಲ್

ಫುಝೊವು ಓಪನ್: ಮೊದಲ ಸುತ್ತಲ್ಲೇ ನಿರ್ಗಮಿಸಿದ ಸೈನಾ ನೆಹ್ವಾಲ್

HSA   ¦    Nov 06, 2019 02:27:03 PM (IST)
ಫುಝೊವು ಓಪನ್: ಮೊದಲ ಸುತ್ತಲ್ಲೇ ನಿರ್ಗಮಿಸಿದ ಸೈನಾ ನೆಹ್ವಾಲ್

ಫುಝೊವು(ಚೀನಾ): ಭಾರತದ ಸೈನಾ ನೆಹ್ವಾಲ್ ಫುಝೊವು ಓಪನ್ ಟೂರ್ನಮೆಂಟ್ ನ ಮೊದಲ ಸುತ್ತಿನಲ್ಲೇ ಚೀನಾದ ಯಾನ್ ಯಾನ್ ಚಿ ವಿರುದ್ಧ ಸೋಲುಂಡು ನಿರ್ಗಮಿಸಿದ್ದಾರೆ.

ಎಂಟನೇ ಶ್ರೇಯಾಂಕದ ಸೈನಾ, ಚೀ ವಿರುದ್ಧ 9-21, 12-21 ರಿಂದ ಕೇವಲ 24 ನಿಮಿಷಗಳಲ್ಲಿ ಸೋಲುಂಡರು.

ಪುರುಷರ ವಿಭಾಗದಲ್ಲಿ ಪರುಪಲ್ಲಿ ಕಶ್ಯಪ್ ಅವರು ಥಮ್ಮಸಿನ್ ಸಿಥಿಕೊಮ್ ವಿರುದ್ಧ 21-14, 21-13ರಿಂದ ಗೆಲುವು ದಾಖಲಿಸಿಕೊಂಡು ಎರಡನೇ ಸುತ್ತಿಗೇರಿದರು. ಮೊದಲ ಸಲ ಥೈಲ್ಯಾಂಡ್ ನ ಆಟಗಾರನ ವಿರುದ್ಧ ಮೊದಲ ಸಲ ಗೆಲುವು ದಾಖಲಿಸಿಕೊಂಡಿದ್ದಾರೆ.