ಪುರುಷರ ಹಾಕಿ ವಿಶ್ವಕಪ್ ಗೆ 2023ರಲ್ಲಿ ಭಾರತದ ಆತಿಥ್ಯ

ಪುರುಷರ ಹಾಕಿ ವಿಶ್ವಕಪ್ ಗೆ 2023ರಲ್ಲಿ ಭಾರತದ ಆತಿಥ್ಯ

HSA   ¦    Nov 08, 2019 07:45:31 PM (IST)
ಪುರುಷರ ಹಾಕಿ ವಿಶ್ವಕಪ್ ಗೆ 2023ರಲ್ಲಿ ಭಾರತದ ಆತಿಥ್ಯ

ನವದೆಹಲಿ: ಪುರುಷರ ಹಾಕಿ ವಿಶ್ವಕಪ್ 2023ರಲ್ಲಿ ಭಾರತದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್ ಐಎಚ್) ಶುಕ್ರವಾರ ಪ್ರಕಟಿಸಿದೆ.

ಸತತ ಎರಡನೇ ಬಾರಿ ಮತ್ತು ಒಟ್ಟು ನಾಲ್ಕನೇ ಸಲ ಭಾರತವ ಹಾಕಿ ವಿಶ್ವಕಪ್ ನ್ನು ಆಯೋಜಿಸುತ್ತಿದೆ. ಇದಕ್ಕೆ ಮೊದಲು 1982, 2010 ಮತ್ತು 2018ರಲ್ಲಿ ಹಾಕಿ ವಿಶ್ವಕಪ್ ನ್ನು ಭಾರತವು ಆಯೋಜಿಸಿತ್ತು.

2022ರಲ್ಲಿ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್ ನ್ನು ಸ್ಪೇನ್ ಮತ್ತು ನೆದರ್ಲೆಂಡ್ ಜಂಟಿಯಾಗಿ ಆಯೋಜಿಸಲಿದೆ ಎಂದು ಎಫ್ ಐಎಚ್ ಹೇಳಿದೆ.

ಪ್ರತಿಷ್ಠಿತ ಟೂರ್ನಿಯನ್ನು ಆಯೋಜಿಸಲು ಹಲವಾರು ದೇಶಗಳು ಬಿಡ್ ಸಲ್ಲಿಸಿದ್ದವು. ಇದರಲ್ಲಿ ಆಯ್ಕೆ ಮಾಡುವುದು ತುಂಬಾ ಕಠಿಣ ವಿಚಾರವಾಗಿತ್ತು. ವಿಶ್ವದೆಲ್ಲೆಡೆ ಹಾಕಿಯನ್ನು ಬೆಳೆಸುವುದು ಎಫ್ ಐಎಚ್ ಗುರಿಯಾಗಿದೆ. ಇದಕ್ಕಾಗಿ ಹೂಡಿಕೆ, ಬಂಡವಾಳ ಬರುವುದು ಬೇಕಾಗಿದೆ ಎಂದು ಎಫ್ ಐಎಚ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ವೇಲ್ ತಿಳಿಸಿದರು.