ನ.23ರಂದು ಭುವನೇಶ್ವರ್ ಕುಮಾರ್ ವಿವಾಹ

ನ.23ರಂದು ಭುವನೇಶ್ವರ್ ಕುಮಾರ್ ವಿವಾಹ

Nov 11, 2017 07:32:55 PM (IST)
ನ.23ರಂದು ಭುವನೇಶ್ವರ್ ಕುಮಾರ್ ವಿವಾಹ

ಮೀರತ್: ಕಳೆದ ಕೆಲವು ಸಮಯದಿಂದ ತನ್ನ ಗೆಳತಿ ನೂಪುರ್ ನಗರ್ ರನ್ನು ಪ್ರೀತಿಸುತ್ತಿದ್ದ ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್ ನವೆಂಬರ್ 23ರಂದು ತನ್ನ ಗೆಳತಿಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ.

ಭುವನೇಶ್ವರ್ ಕುಮಾರ್ ಮದುವೆಯು ನ.23ರಂದು ಮೀರತ್ ನಲ್ಲಿ ನಡೆಯಲಿದ್ದು, ನ.26 ಮೀರತ್ ಮತ್ತು ನ.30ರಂದು ದೆಹಲಿಯಲ್ಲಿ ಜೌತಣಕೂಟ ನಡೆಯಲಿದೆ ಎಂದು ಭುವಿ ತಂದೆ ಕಿರಣ್ ಪಾಲ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಭುವಿ ತನ್ನ ಪ್ರೇಯಸಿ ನಗರ್ ಜತೆಗೆ ಇರುವ ಫೋಟೊವೊಂದನ್ನು ಇನ್ ಸ್ಟಾ ಗ್ರಾಂಗೆ ಅಪ್ ಲೋಡ್ ಮಾಡಿದ್ದರು. ಇದರ ಬಳಿಕ ಭುವಿ ಮದುವೆ ಬಗ್ಗೆ ಆಗಾಗ ಗಾಳಿಸುದ್ದಿ ಹರಡುತ್ತಲೇ ಇತ್ತು. ಭುವಿ ಪ್ರೇಯಸಿ ನಗರ್ ವೃತ್ತಿಯಲ್ಲಿ ಇಂಜಿನಿಯರ್.