ವಿಶ್ವಕಪ್ ಸೆಮಿಫೈನಲಿನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ವಿಶ್ವಕಪ್ ಸೆಮಿಫೈನಲಿನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

HSA   ¦    Jul 10, 2019 07:27:59 PM (IST)
ವಿಶ್ವಕಪ್ ಸೆಮಿಫೈನಲಿನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ

ಮ್ಯಾಂಚೆಸ್ಟರ್: ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಆಟದ ಹೊರತಾಗಿಯೂ ಟೀಂ ಇಂಡಿಯಾ ವಿಶ್ವಕಪ್ ನ ಸೆಮಿಫೈನಲಿನಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್ ಗಳಿಂದ ಸೋಲುಂಡಿದೆ.

ನಿನ್ನೆ ಮಳೆ ಅಡ್ಡಿ ಉಂಟು ಮಾಡಿದ ಪರಿಣಾಮ ಇಂದಿಗೆ ಮುಂದೂಡಲ್ಪಟ್ಟಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 239 ರನ್ ಮಾಡಿತು.

240 ರನ್ ಗೆಲುವಿನ ಗುರಿಯನ್ನು ಪಡೆದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಒಂದು ಹಂತದಲ್ಲಿ ಐದು ರನ್ ಗಳಿಗೆ ಮೂರು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಇದರ ಬಳಿಕ ದಿನೇಶ್ ಕಾರ್ತಿಕ್ 6 ರನ್ ಮಾಡಿ ಬೇಗನೆ ನಿರ್ಗಮಿಸಿದರು. ಆದರೆ ರಿಷಬ್ ಪಂತ್(32) ಮತ್ತು ಪಾಂಡ್ಯ(32) ತಂಡವನ್ನು ಆಧರಿಸಿದರು.

ರಿಷಬ್ ಪಂತ್ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳಕೊಂಡರು. ಪಾಂಡ್ಯ ಕೂಡ ಅದೇ ರೀತಿಯಲ್ಲಿ ನಿರ್ಗಮಿಸಿದರು. ಇದರ ಬಳಿಕ ಜಡೇಜಾ ಮತ್ತು ಧೋನಿ ಜೋಡಿ ತಂಡದ ಇನ್ನಿಂಗ್ಸ್ ಕಟ್ಟಿ ಗೆಲುವಿನ ಆಸೆ ಚಿಗುರಿಸಿದರು.

ಜಡೇಜಾ ಕಿವೀಸ್ ಬೌಲರ್ ಗಳನ್ನು ದಂಡಿಸಿ ಕೇವಲ 59 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 77 ರನ್ ಬಾರಿಸಿ ಬೌಂಡರಿ ಲೈನ್ ಸನಿಹ ಕ್ಯಾಚಿತ್ತು ನಿರ್ಗಮಿಸಿದರು.

ಹತ್ತು ಎಸೆತಗಳಲ್ಲಿ 25 ರನ್ ಬೇಕಿದ್ದಾಗಲೇ ಧೋನಿ ರನೌಟ್ ಆಗಿ ನಿರ್ಗಮಿಸಿದ ಬಳಿಕ ಟೀಂ ಇಂಡಿಯಾದ ಅಭಿಮಾನಿಗಳು ಗೆಲುವಿನಾಸೆ ಕೈ ಬಿಟ್ಟರು. ಹೆನ್ರಿ ಮೂರು ವಿಕೆಟ್ ಉರುಳಿಸಿ ಟೀಂ ಇಂಡಿಯಾಗೆ ಆಘಾತ ನೀಡಿದರು.