ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರಪೇಟೆಯ ಜೀವನ್ ಆಯ್ಕೆ

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರಪೇಟೆಯ ಜೀವನ್ ಆಯ್ಕೆ

CI   ¦    Mar 13, 2018 03:08:36 PM (IST)
ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರಪೇಟೆಯ ಜೀವನ್ ಆಯ್ಕೆ

ಸೋಮವಾರಪೇಟೆ: ಏಪ್ರಿಲ್ 4 ರಿಂದ 14ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯುವ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸೋಮವಾರಪೇಟೆಯ ಜೀವನ್ ಆಯ್ಕೆಯಾಗಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟದ ರಿಲೇ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಜೀವನ್ ಪ್ರಸ್ತುತ ಪಾಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಸೋಮವಾರಪೇಟೆ ಸಮೀಪದ ಕಾರೆಕೊಪ್ಪ ನಿವಾಸಿ ಸುರೇಶ್ ಹಾಗೂ ಶಕುಂತಲ ದಂಪತಿಯ ಪುತ್ರರಾಗಿರುವ ಇವರು, ಇತ್ತೀಚೆಗೆ ಇಂಡೊನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದರು.