ಅಮೆರಿಕದಲ್ಲಿ ನಡೆದ ದಿವ್ಯಾಂಗರ ಚೆಸ್ ಪಂದ್ಯಾವಳಿ ಸಮರ್ಥ ರನ್ನರ್ ಅಪ್

ಅಮೆರಿಕದಲ್ಲಿ ನಡೆದ ದಿವ್ಯಾಂಗರ ಚೆಸ್ ಪಂದ್ಯಾವಳಿ ಸಮರ್ಥ ರನ್ನರ್ ಅಪ್

SB   ¦    Jul 16, 2019 06:28:03 PM (IST)
ಅಮೆರಿಕದಲ್ಲಿ ನಡೆದ ದಿವ್ಯಾಂಗರ ಚೆಸ್ ಪಂದ್ಯಾವಳಿ ಸಮರ್ಥ ರನ್ನರ್ ಅಪ್

ಕಾರವಾರ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ದಿವ್ಯಾಂಗರ ಚೆಸ್ ಚಾಂಪಿಯನ್ ಶಿಪ್ ನ 7 ನೇ ಸುತ್ತಿನಲ್ಲಿ 5.5 ಅಂಕ ಗಳಿಸಿ ದೈಹಿಕ ದುರ್ಬಲರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಮರ್ಥ್ ಜೆ. ರಾವ್ ರನ್ನರ್ ಅಪ್ ಆಗಿ, ಸಾಧನೆ ಮಾಡಿದ್ದಾರೆ.

ಕೂಳಿತುಕೊಳ್ಳಲು, ನಿಲ್ಲಲು, ನಡೆದಾಡಲಾಗದ ಸಮರ್ಥ ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿಯಿಂದ (ನರ ಸಮಸ್ಯೆ) ಬಳಲುತಿದ್ದು, ಮಾತು ಅಸ್ಪಷ್ಟವಾಗಿದೆ. ಚದುರಂಗದಾಟದಲ್ಲಿ ಸಮರ್ಥ ಜೆ. ರಾವ್ ಚತುರನಾದ ಆಟಗಾರ. ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾನೆ.

ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ್ ರಾವ್ ಹಾಗೂ ಐಟಿಐ ಉದ್ಯೋಗಿ ವಿನುತಾ ಭಟ್ ದಂಪತಿಗಳ ಸುಪುತ್ರ ಸಮರ್ಥ್ ರಾವ್ ಸತತ ಎರಡನೇ ಬಾರಿಗೆ ಭಾರತದ ಕೀರ್ತಿ ಸಾರಿದ್ದಾರೆ.