ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

YK   ¦    Oct 30, 2018 10:36:59 AM (IST)
ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ದಂಪತಿಗೆ ಮಂಗಳವಾರ ಬೆಳಿಗ್ಗೆ ಗಂಡು ಮಗುವಾಗಿದೆ.

ಈ ಸಂತಸದ ವಿಚಾರವನ್ನು ಮಿರ್ಜಾ ಪತಿ ಶೋಯೆಬ್ ಮಲ್ಲಿಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ದಂಪತಿಗಳಿಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ.

ಟ್ವೀಟ್ ನಲ್ಲಿ ಏನಿದೆ: ‘ಹೇಳಲು ಉತ್ಸಾಹಗೊಂಡಿದ್ದೇನೆ: ನಮಗೆ ಗಂಡು ಮಗು ಜನಿಸಿದೆ. ದೇವರ ದಯೆಯಿಂದ ನನ್ನ ಹುಡುಗಿ ಖುಷಿಯಾಗಿ ಮತ್ತು ಎಂದಿನತೆಯೇ ಧೈರ್ಯದಿಂದ ಇದ್ದಾಳೆ. ಶುಭಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.