ಭಾರತಕ್ಕೆ ೭ ವಿಕೆಟ್ ಗಳ ಭರ್ಜರಿ ಜಯ: ದಾಖಲೆ ನಿರ್ಮಿಸಿದ ರೋಹಿತ್

ಭಾರತಕ್ಕೆ ೭ ವಿಕೆಟ್ ಗಳ ಭರ್ಜರಿ ಜಯ: ದಾಖಲೆ ನಿರ್ಮಿಸಿದ ರೋಹಿತ್

YK   ¦    Jul 07, 2019 09:10:54 AM (IST)
ಭಾರತಕ್ಕೆ ೭ ವಿಕೆಟ್ ಗಳ ಭರ್ಜರಿ ಜಯ: ದಾಖಲೆ ನಿರ್ಮಿಸಿದ ರೋಹಿತ್

ಲಂಡನ್: ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ೭ ವಿಕೆಟ್ ಗಳ ಭರ್ಜರಿ ಜಯವನ್ನು ಸಾಧಿಸಿದೆ. 
ಶ್ರೀಲಂಕಾ ನೀಡಿದ ಗುರುಯನ್ನು ಬೆನ್ನಟ್ಟಿದ ಭಾರತ ತಂಡ ೪೩/೩ ಓವರ್ ಗಳಲ್ಲಿ ೪ವಿಕೆಟ್ ಕಳೆದುಕೊಂಡು ೨೬೫ ರನ್ ಗಳಿಸಿ ೭ ವಿಕೆಟ್ ಗಳ ಅಮೋಘ ಸಾಧನೆಯನ್ನು ಮಾಡಿದೆ.

ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ: ವಿಶ್ವಕಪ್ ಟೂರ್ನಿಯೊಂದರಲ್ಲಿ 5 ಶತಕ ಸಿಡಿಸಿದ ಐತಿಹಾಸಿಕ ದಾಖಲೆ ರೋಹಿತ್ ಶರ್ಮಾ ಮಾಡಿದ್ದಾರೆ.
ರೋಹಿತ್ ಶರ್ಮಾ ಅವರು ಚೇಸಿಂಗ್ ವೇಳೆಯೇ 3 ಶತಕಗಳನ್ನು ಗಳಿಸಿದ್ದು ವಿಶೇಷವಾಗಿದ್ದು, ಇದೇ ಸಂದರ್ಭದಲ್ಲಿ 600 ರನ್ ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 45 ಪಂದ್ಯಗಳಿಂದ ಸಚಿನ್ 6 ವಿಶ್ವಕಪ್ ಗಳಲ್ಲಿ 6 ಶತಕ ಸಿಡಿಸಿದ್ದರೆ, 2 ವಿಶ್ವಕಪ್ ಆಡಿರುವ ರೋಹಿತ್ 16 ಪಂದ್ಯಗಳಿಂದ 06 ಶತಕ ಸಿಡಿಸಿದ್ದಾರೆ.