ಫುಟ್ಬಾಲ್ ತರಬೇತಿ ಕೇಂದ್ರಕ್ಕೆ ಬೆಂಕಿ: 10 ಮಂದಿ ಸಾವು

ಫುಟ್ಬಾಲ್ ತರಬೇತಿ ಕೇಂದ್ರಕ್ಕೆ ಬೆಂಕಿ: 10 ಮಂದಿ ಸಾವು

HSA   ¦    Feb 08, 2019 04:39:13 PM (IST)
ಫುಟ್ಬಾಲ್ ತರಬೇತಿ ಕೇಂದ್ರಕ್ಕೆ ಬೆಂಕಿ: 10 ಮಂದಿ ಸಾವು

ರಿಯೊ ಡಿ ಜನೆರಿಯೊ: ಫುಟ್ಬಾಲ್ ಕ್ಲಬ್ ಫ್ಲಾಮೆಂಗೊದ ತರಬೇತಿ ಕೇಂದ್ರದಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ ಅವಘಡದಿಂದಾಗಿ 10 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ರಿಯೊ ಡಿ ಜನೆರಿಯೊದ ಫುಟ್ಬಾಲ್ ಕ್ಲಬ್ ಆಗಿರುವ ಫ್ಲಾಮೆಂಗೊದ ಸ್ಟೇಟ್ ಆಫ್ ದ ಆರ್ಟ್ ಸೆಂಟರ್ ನಲ್ಲಿ ಕಾಣಿಸಿಕೊಂಡ ಅವಘಡ ಸಂಭವಿಸಿದೆ.

ಬೆಂಕಿಗೆ ಕಾರಣಗಳು ತಿಳಿದುಬಂದಿಲ್ಲ. ಆದರೆ ಈ ಆರ್ಟ್ ಸೆಂಟರ್ ನ್ನು ಎರಡು ತಿಂಗಳ ಮೊದಲಷ್ಟೇ ನವೀಕರಣಗೊಳಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.