ರಾಜಸ್ಥಾನ ವಿರುದ್ಧ ರೋಚಕ ಗೆಲುವು ದಾಖಲಿಸಿಕೊಂಡ ಚೆನ್ನೈ

ರಾಜಸ್ಥಾನ ವಿರುದ್ಧ ರೋಚಕ ಗೆಲುವು ದಾಖಲಿಸಿಕೊಂಡ ಚೆನ್ನೈ

HSA   ¦    Apr 12, 2019 10:28:23 AM (IST)
ರಾಜಸ್ಥಾನ ವಿರುದ್ಧ ರೋಚಕ ಗೆಲುವು ದಾಖಲಿಸಿಕೊಂಡ ಚೆನ್ನೈ

ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರಿಮಿಯರ ಲೀಗ್(ಐಪಿಎಲ್)ನ ಪಂದ್ಯದಲ್ಲಿ ಕೊನೇ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿಕೊಂಡಿದೆ.

ಗುರುವಾರ ಇಲ್ಲಿನ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಂ.ಎಸ್. ಧೋನಿ ನಾಯಕನಾಗಿ ಐಪಿಎಲ್ ನಲ್ಲಿ 100ನೇ ಗೆಲುವು ಪಡೆದು ದಾಖಲೆ ಮಾಡಿದರು.

152 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದ ಚೆನ್ನೈಗೆ ಧವಲ್ ಕುಲಕರ್ಣಿ ಮೊದಲ ಆಘಾತ ನೀಡಿದರು. ಶೇನ್ ವಾಟ್ಸನ್ ಖಾತೆ ತೆರೆಯುವ ಮೊದಲೇ ನಿರ್ಗಮಿಸಿದರು. ಇದರ ಮರು ಓವರ್ ನಲ್ಲಿ ಸುರೇಶ್ ರೈನಾ(4) ರನೌಟ್ ಆದರು.

ಇದರ ಬೆನ್ನಲ್ಲೇ ಡು ಪ್ಲೆಸಿಸ್(7) ಮತ್ತು ಕೇದಾರ್ ಜಾಧವ್(1) ಬೇಗನೆ ನಿರ್ಗಮಿಸಿದರು. ಆದರೆ ಕಪ್ತಾನ ಧೋನಿ ಜತೆ ಸೇರಿದ ಅಂಬಾಟಿ ರಾಯುಡು 95 ರನ್ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.

57 ರನ್ ಮಾಡಿದ ರಾಯುಡು ವಿಕೆಟನ್ನು ಬೆನ್ ಸ್ಟೋಕ್ಸ್ ಉರುಳಿಸಿದರು. ಅಂತಿಮ ನಾಲ್ಕು ಎಸೆತಗಳಲ್ಲಿ ಎಂಟು ರನ್ ಅಗತ್ಯವಿತ್ತು. 58 ರನ್ ಮಾಡಿದ ಧೋನಿ ವಿಕೆಟ್ ಉರುಳಿಸಿದ ಸ್ಟೋಕ್ಸ್ ರಾಜಸ್ಥಾನದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ ಮಿಚೆಲ್ ಸ್ಯಾಂಟರ್ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡದ ಗೆಲುವು ದೃಢಪಡಿಸಿದರು.