ಹಿಂದಿನ ಆಸ್ಟ್ರೇಲಿಯಾ ತಂಡದಂತೆ ಟೀಂ ಇಂಡಿಯಾ ಸರ್ವಶ್ರೇಷ್ಠ: ಧವನ್

ಹಿಂದಿನ ಆಸ್ಟ್ರೇಲಿಯಾ ತಂಡದಂತೆ ಟೀಂ ಇಂಡಿಯಾ ಸರ್ವಶ್ರೇಷ್ಠ: ಧವನ್

Oct 09, 2017 03:36:37 PM (IST)
ಹಿಂದಿನ ಆಸ್ಟ್ರೇಲಿಯಾ ತಂಡದಂತೆ ಟೀಂ ಇಂಡಿಯಾ ಸರ್ವಶ್ರೇಷ್ಠ: ಧವನ್

ನವದೆಹಲಿ: ಯುವ ಆಟಗಾರರು ಕಡಿಮೆ ಸಮಯದಲ್ಲಿ ತಂಡಕ್ಕೆ ಹೊಂದಿಕೊಳ್ಳುವುದು ಟೀಂ ಇಂಡಿಯಾಗೆ ತುಂಬಾ ಒಳ್ಳೆಯ ಸಂಕೇತ ಎಂದು ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ಸರಣಿಯಲ್ಲಿ ಗೆಲುವು ದಾಖಲಿಸಿ ನಂಬರ್ ವನ್ ಸ್ಥಾನ ಪಡೆದುಕೊಂಡಿರುವ ಟೀಂ ಇಂಡಿಯಾ ಟಿ-20ಯಲ್ಲಿ 3-0ಯಿಂದ ಗೆಲುವು ದಾಖಲಿಸಿಕೊಂಡರೆ ಅಗ್ರ ಸ್ಥಾನಕ್ಕೇರಲಿದೆ. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಟಿ-20 ಸರಣಿ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಟೀಂ ಇಂಡಿಯಾ, ಮೂರು ಮಾದರಿಯ ಕ್ರಿಕೆಟಿನಲ್ಲಿ ಅಗ್ರಸ್ಥಾನ ಪಡೆದುಕೊಳ್ಳಬಹುದು.

ಹಿಂದಿನ ಆಸ್ಟ್ರೇಲಿಯಾ ತಂಡದಂತೆ ನಾವು ಈಗ ಕ್ರಿಕೆಟಿನಲ್ಲಿ ಸಾರ್ವಭೌಮತ್ವ ಮೆರೆಯಬೇಕು. ಇದು ಹೆಚ್ಚು ಕಷ್ಟವೇನಲ್ಲ ಎಂದು ಧವನ್ ತಿಳಿಸಿದರು.

ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತುಂಬಾ ಕಡಿಮೆ ಸಮಯದಲ್ಲಿ ಪ್ರೌಢತೆ ಪಡೆದುಕೊಂಡಿದ್ದಾರೆ ಎಂದ ಧವನ್, ನಮ್ಮ ತಂಡ ನಿಜವಾಗಿಯೂ ಬಲಿಷ್ಠವಾಗಿದೆ. ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರಿದ್ದಾರೆ. ಯುವಕರು ಬೇಗನೆ ಪ್ರೌಢರಾಗುತ್ತಿದ್ದಾರೆ. ಐಪಿಎಲ್ ವೇಳೆ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಯುವ ಆಟಗಾರರು ಸಮಯ ಕಳೆಯುತ್ತಿರುವುದು ನೆರವಾಗಿದೆ ಎನ್ನುವುದು ಧವನ್ ಅಭಿಪ್ರಾಯ.