ದೈತ್ಯ ಆಟಗಾರ ಗೇಲ್ ಅಬ್ಬರದ ಬ್ಯಾಟಿಂಗ್: ಪಂಜಾಬ್ ಜಯಭೇರಿ

ದೈತ್ಯ ಆಟಗಾರ ಗೇಲ್ ಅಬ್ಬರದ ಬ್ಯಾಟಿಂಗ್: ಪಂಜಾಬ್ ಜಯಭೇರಿ

SRJ   ¦    Apr 20, 2018 10:15:27 AM (IST)
ದೈತ್ಯ ಆಟಗಾರ ಗೇಲ್ ಅಬ್ಬರದ ಬ್ಯಾಟಿಂಗ್: ಪಂಜಾಬ್ ಜಯಭೇರಿ

ಮೊಹಾಲಿ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಅವರ ಅಬ್ಬರದ ಬ್ಯಾಟಿಂಗ್ ಶೈಲಿಗೆ ಸನ್ ರೈಸರ್ಸ್ ತಂಡದ ಬೌಲರ್ ಗಳು ಕಂಗಾಲಾದರು. 38 ವರ್ಷ ವಯಸ್ಸಿನ ಕ್ರಿಸ್ ಗೇಲ್ ಅವರು 58 ಎಸೆತಗಳಲ್ಲಿ ಭರ್ಜರಿ 100 ರನ್ ಗಡಿ ದಾಟುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದರು.

ಪಂಜಾಬ್ ತಂಡದ ಆರಂಭಿಕ ಆಟಗಾರ, ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು 63 ಎಸೆತಗಳಲ್ಲಿ 104 ರನ್ ಗಳಿಸಿ ಅಜೇಯರಾಗಿ ಉಳಿದದ್ದಲ್ಲದೇ, ತಂಡದ ಮೊತ್ತವನ್ನು 193/3ಕ್ಕೆ ಏರಿಸಲು ನೆರವಾದರು. ಅಲ್ಲದೇ ಗೇಲ್ ಅವರು 11 ಸಿಕ್ಸರ್ ಹಾಗು 1 ಬೌಂಡರಿ ಬಾರಿಸಿದರು.

ಸುಮಾರು 193 ರನ್ ಗುರಿಯ ಬೆನ್ನು ಹತ್ತಿದ ಹೈದರಾಬಾದ್ ತಂಡ 178/4 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು. ಶಿಖರ್ ಧವನ್, ವೃದ್ಧಮಾನ್ ಮತ್ತು ಯೂಸುಫ್ ಪಠಾಣ್ ಬೇಗನೇ ಔಟಾಗಿ ತಂಡಕ್ಕೆ ಆತಂಕ ಉಂಟುಮಾಡಿದರು. ತದನಂತರ ಸನ್ ರೈಸರ್ಸ್ ಪರ ಮನೀಶ್ ಪಾಂಡೆ 57 ರನ್ ಹಾಗೂ ಕೇನ್ ವಿಲಿಯಮ್ಸ್ 54 ರನ್ ಗಳಿಸಿದರು.

ಕ್ರಿಸ್ ಗೇಲ್ ಕಳೆದ ಬಾರಿಯ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದಲ್ಲಿದ್ದರು. ಈ ಬಾರಿ ಪಂಜಾಬ್ ತಂಡದಲ್ಲಿದ್ದುಕೊಂಡು ಬಾಲ್ ನ್ನು ಹಿಗ್ಗಾಮುಗ್ಗ ಚಚ್ಚಿದ್ದಾರೆ. ಇವರು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ 15 ರನ್ ಗಳ ಜಯ ತಂದುಕೊಟ್ಟ ಕ್ರಿಸ್ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.