ಮಿಲ್ಲರ್ ಅಬ್ಬರದ ಬ್ಯಾಟಿಂಗ್: ದ. ಆಫ್ರಿಕಾಗೆ ಐದು ವಿಕೆಟ್ ಗೆಲುವು

ಮಿಲ್ಲರ್ ಅಬ್ಬರದ ಬ್ಯಾಟಿಂಗ್: ದ. ಆಫ್ರಿಕಾಗೆ ಐದು ವಿಕೆಟ್ ಗೆಲುವು

HSA   ¦    Feb 11, 2018 10:56:13 AM (IST)
ಮಿಲ್ಲರ್ ಅಬ್ಬರದ ಬ್ಯಾಟಿಂಗ್: ದ. ಆಫ್ರಿಕಾಗೆ ಐದು ವಿಕೆಟ್ ಗೆಲುವು

ಜೋಹನ್ಸ್ ಬರ್ಗ್: ಡೇವಿಡ್ ಮಿಲ್ಲರ್ ಆಕ್ರಮಣಕಾರಿ ಆಟದ ಫಲವಾಗಿ ದಕ್ಷಿಣ ಆಫ್ರಿಕಾ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಐದು ವಿಕೆಟ್ ಗೆಲುವು ದಾಖಲಿಸಿಕೊಂಡಿದೆ.

ಆರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗ 3-1ರ ಮುನ್ನಡೆಯಲ್ಲಿದೆ.

ಮಳೆಭಾದಿತ ಪಂದ್ಯದಲ್ಲಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 28 ಓವರ್ ಗಳಲ್ಲಿ ಗೆಲುವಿಗೆ 202 ರನ್ ಗಳ ಗೆಲುವಿನ ಗುರಿಪಡೆದ ದ. ಆಫ್ರಿಕಾ ಒಂದು ಹಂತದಲ್ಲಿ 16.5 ಓವರ್ ಗಳಲ್ಲಿ 102 ರನ್ ಗಳಿಗೆ ನಾಲ್ಕು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು.

ಆದರೆ ಇದರ ಬಳಿಕ ಅಪಾಯಕಾರಿ ಬ್ಯಾಟ್ಸ್ ಮೆನ್ ಡೇವಿಡ್ ಮಿಲ್ಲರ್ ಆರು ರನ್ ಮಾಡಿದ್ದಾಗ ಕ್ಯಾಚ್ ಕೈಚೆಲ್ಲಿದ ಶ್ರೇಯಸ್ ಐಯ್ಯರ್ ಪಂದ್ಯವನ್ನು ಎದುರಾಳಿಗೆ ಬಿಟ್ಟುಕೊಟ್ಟರು. ಇದೇ ಓವರ್ ನಲ್ಲಿ ಯಜುವೇಂದ್ರ ಛಾಹಲ್ ನೋ ಬಾಲ್ ನಲ್ಲಿ ಮಿಲ್ಲರ್ ನ್ನು ಬೌಲ್ಡ್ ಮಾಡಿ ಮತ್ತೊಂದು ಜೀವದಾನ ನೀಡಿದರು.

ಎರಡು ಜೀವದಾನ ಪಡೆದುಕೊಂಡು ಮಿಲ್ಲರ್ ಕೇವಲ 28 ಎಸೆತಗಳಲ್ಲಿ 39 ರನ್ ಬಾರಿಸಿದರು. ಮಿಲ್ಲರ್ ಗೆ ಸರಿಯಾಗಿ ಜತೆ ನೀದಿದ ಹೆನ್ರಿಕ್ ಕ್ಲಾಸನ್ 27 ಎಸೆತಗಳಲ್ಲಿ 43 ರನ್ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಆ್ಯಂಡಿಲೆ ಫೆಹ್ಲುಕ್ವಾಯೊ ಐದು ಎಸೆತಗಳಲ್ಲಿ 23 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಮೊದಲು ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಬೇಗನೆ ಕಳಕೊಂಡಿತು. ಆದರೆ ಧವನ್ ಮತ್ತು ವಿರಾಟ್ ಕೊಹ್ಲಿ 158 ರನ್ ಜತೆಯಾಟ ನಡೆಸಿ ತಂಡವನ್ನು ದೊಡ್ಡ ಮೊತ್ತದತ್ತ ಸಾಗಿಸಿದರು. ಕೊಹ್ಲಿ 75 ರನ್ ಮಾಡಿ ಕ್ರಿಸ್ ಮೊರಿಸ್ ಗೆ ವಿಕೆಟ್ ಒಪ್ಪಿಸಿದರು. 13ನೇ ಶತಕ ಪೂರೈಸಿದ ಧವನ್ 109 ರನ್ ಮಾಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ರಹಾನೆ(8), ಐಯ್ಯರ್(18), ಪಾಂಡ್ಯ(9) ಬೇಗನೆ ನಿರ್ಮಿಸಿದರು. ಆದರೆ ಧೋನಿ 43 ಎಸೆತಗಳಲ್ಲಿ 42 ರನ್ ಮಾಡಿ ತಂಡವನ್ನು ಹೋರಾಟಕಾರಿ ಮೊತ್ತದತ್ತ ಸಾಗಿಸಿದರು. ಟೀಂ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 289 ರನ್ ಪೇರಿಸಿತು.

More Images