ಮಹಿಳಾ ಕ್ರಿಕೆಟ್ ಆಟಗಾರ್ತಿಯಿಂದ ಡಿಎಸ್ ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ!

ಮಹಿಳಾ ಕ್ರಿಕೆಟ್ ಆಟಗಾರ್ತಿಯಿಂದ ಡಿಎಸ್ ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ!

HSA   ¦    Jul 10, 2018 02:21:27 PM (IST)
ಮಹಿಳಾ ಕ್ರಿಕೆಟ್ ಆಟಗಾರ್ತಿಯಿಂದ ಡಿಎಸ್ ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ!

ಚಂಢೀಗಡ: ನಕಲಿ ಪದವಿ ಪ್ರಮಾಣ ಪತ್ರ ನೀಡಿದ ಟೀಂ ಇಂಡಿಯಾ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಪಂಜಾಬ್ ಸರ್ಕಾರ ನೀಡಿದ್ದ ಪೊಲೀಸ್ ಉಪ ವರಿಷ್ಠಾಧಿಕಾರಿ ಹುದ್ದೆಯನ್ನು ಹಿಂದಕ್ಕೆ ಪಡೆದಿದೆ.

ಏಕದಿನ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹರ್ಮನ್ ಪ್ರೀತ್ ಕೌರ್ ಗೆ ಮಾರ್ಚ್ ನಲ್ಲಿ ಪಂಜಾಬ್ ಸರ್ಕಾರವು ಡಿಎಸ್ ಪಿ ಹುದ್ದೆ ನೀಡಿ ಗೌರವಿಸಿತ್ತು. ಈ ವೇಳೆ ಕೌರ್ ಅವರು ಮೀರತ್ ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯದಲ್ಲಿ 2011ರಲ್ಲಿ ಪದವಿ ಪಡೆದ ಪ್ರಮಾಣಪತ್ರ ನೀಡಿದ್ದರು.

ಆದರೆ ಪರಿಶೀಲನೆ ವೇಳೆ ಈ ಪ್ರಮಾಣಪತ್ರ ನಕಲಿ ಎಂದು ತಿಳಿದುಬಂದಿತ್ತು. ಹರ್ಮನ್ ಪ್ರೀತ್ ಕೌರ್ ಗೆ ಕಾನ್ ಸ್ಟೇಬಲ್ ಹುದ್ದೆ ನೀಡಬಹುದು ಎಂದು ಪಂಜಾಬ್ ಸರ್ಕಾರ ಹೇಳಿದೆ. ಹರ್ಮನ್ ಪ್ರೀತ್ ನಕಲಿ ದಾಖಲೆ ನೀಡಿರುವುದಕ್ಕೆ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲವೆಂದು ಪಂಜಾಬ್ ಸರ್ಕಾರ ತಿಳಿಸಿದೆ.