ಅಫ್ಘಾನಿಸ್ತಾನ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದ ಟೀಂ ಇಂಡಿಯಾ

ಅಫ್ಘಾನಿಸ್ತಾನ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದ ಟೀಂ ಇಂಡಿಯಾ

HSA   ¦    Jun 22, 2019 06:35:47 PM (IST)
ಅಫ್ಘಾನಿಸ್ತಾನ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದ ಟೀಂ ಇಂಡಿಯಾ

ಹ್ಯಾಂಪ್ ಶೇರ್: ಕ್ರಿಕೆಟ್ ಶಿಶು ಅಪಘಾನಿಸ್ತಾನವು ವಿಶ್ವಕಪ್ ನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಕಳಕೊಂಡು ನಿಗದಿತ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು.

ಆರಂಭಿಕ ರೋಹಿತ್ ಶರ್ಮಾ ಕೇವಲ ಒಂದು ರನ್ ಮಾಡಿ ನಿರ್ಗಮಿಸಿದ ಬಳಿಕ ಟೀಂ ಇಂಡಿಯಾದ ಬ್ಯಾಟ್ಸ್ ಮೆನ್ ಗಳು ಅಫ್ಘಾನ್ ಬೌಲಿಂಗ್ ದಾಳಿ ಮುಂದೆ ಕಂಗೆಟ್ಟರು.

ವಿರಾಟ್ ಕೊಹ್ಲಿ 67, ಕೇದಾರ್ ಜಾಧವ್ 52, ಕೆಎಲ್ ರಾಹುಲ್ 30 ರನ್ ಮಾಡಿರುವುದನ್ನು ಹೊರತುಪಡಿಸಿ ಉಳಿದ ಆಟಗಾರರು ವಿಫಲರಾದರು.

ಗುಲ್ಬದಿನ್ ನಬಿ, ಮೊಹಮ್ಮದ್ ನಬಿ ತಲಾ ಎರಡೆರಡು ವಿಕೆಟ್ ಪಡೆದರು.