ಎಬಿಡಿಯನ್ನು ಸಹೋದರ ಎಂದ ಕೊಹ್ಲಿ

ಎಬಿಡಿಯನ್ನು ಸಹೋದರ ಎಂದ ಕೊಹ್ಲಿ

YK   ¦    May 27, 2018 08:51:02 AM (IST)
ಎಬಿಡಿಯನ್ನು ಸಹೋದರ ಎಂದ ಕೊಹ್ಲಿ

ನವದೆಹಲಿ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗೆ ವಿದಾಯ ಹೇಳಿದ್ದು, ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹೋದರ ಎಂದು ಸಂಬೋಧಿಸಿದ್ದಾರೆ.

ಡಿವಿಲಿಯರ್ಸ್ಗೆ ಶನಿವಾರ ಶುಭ ಕೋರಿರುವ ಕೊಹ್ಲಿ, ನಿವೃತ್ತಿ ಬದುಕು ಖುಷಿಯಾಗಿ ಕಳೆಯಿರಿ ಎಂದು ಹಾರೈಸಿದ್ದಾರೆ.

‘ಸಹೋದರ, ನೀನು ಮಾಡಿದ ಎಲ್ಲ ಒಳ್ಳೆಯ ಕಾರ್ಯಗಳೂ ಖುಷಿ ನೀಡಿವೆ. ಬ್ಯಾಟಿಂಗ್‌ಗೆ ಹೊಸ ವ್ಯಾಖ್ಯಾನ ಬರೆದ ನೀನು, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಳೆ ತುಂಬಿದ್ದೀಯ’ ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ  ವಿರಾಟ್ ಮತ್ತು ಎಬಿಡಿ ಅವರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಜತೆಯಾಗಿ ಆಡುತ್ತಿದ್ದಾರೆ.