ವಿಶ್ವಕಪ್ ನಿಂದ ಬ್ರೆಜಿಲ್ ನ್ನು ಹೊರಗಟ್ಟಿದ ಬೆಲ್ಜಿಯಂ

ವಿಶ್ವಕಪ್ ನಿಂದ ಬ್ರೆಜಿಲ್ ನ್ನು ಹೊರಗಟ್ಟಿದ ಬೆಲ್ಜಿಯಂ

HSA   ¦    Jul 07, 2018 09:39:16 AM (IST)
ವಿಶ್ವಕಪ್ ನಿಂದ ಬ್ರೆಜಿಲ್ ನ್ನು ಹೊರಗಟ್ಟಿದ ಬೆಲ್ಜಿಯಂ

ಕಝನ: ಆರಂಭದಲ್ಲೇ ಗೋಲು ಬಾರಿಸಿ ಮುನ್ನಡೆ ಪಡೆದುಕೊಂಡು ಬಳಿಕ ಬ್ರೆಜಿಲ್ ನ ಹೋರಾಟವನ್ನು ಸಮರ್ಥವಾಗಿ ನಿಭಾಯಿಸಿದ ಬೆಲ್ಜಿಯಂ ತಂಡವು ಫಿಫಾ ವಿಶ್ವಕಪ್ ನಲ್ಲಿ ಐದು ಸಲದ ಚಾಂಪಿಯನ್ನರನ್ನು ಹೊರಗಟ್ಟಿದೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲಿನಲ್ಲಿ 2-1ರ ಗೆಲುವು ದಾಖಲಿಸಿಕೊಂಡ ಬೆಲ್ಜಿಯಂ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೆಣಸಲಿದೆ.

ಫೆರ್ನಾಂಡಿನ್ಹೊ ಬಾರಿಸಿದ ಸ್ವಗೋಲು ಮತ್ತು ಕೆವಿನ್ ಡೆ ಬ್ರುಯನೆ ಬಾರಿಸಿದ ಗೋಲಿನ ನೆರವಿನಿಂದ ಬೆಲ್ಜಿಯಂ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲು ಯಶಸ್ವಿಯಾಯಿತು.

ಕಳೆದ ನಾಲ್ಕು ವಿಶ್ವಕಪ್ ನಲ್ಲಿ ಬ್ರೆಜಿಲ್ ಕ್ವಾರ್ಟರ್ ಫೈನಲ್ಲೇ ನಿರ್ಗಮಿಸಿರುವುದು ಮಾತ್ರ ಅಚ್ಚರಿ ಮೂಡಿಸಿದೆ.

13ನೇ ನಿಮಿಷದಲ್ಲಿ ಫೆರ್ನಾಂಡಿನ್ಹೊ ಹೆಗಲಿಗೆ ತಾಗಿದ ಚೆಂಡು ಗೋಲ್ ಬಾಕ್ಸ್ ನೊಳಗೆ ತಲುಪಿದೆ. ಇದರ ಬಳಿಕ 31ನೇ ನಿಮಿಷದಲ್ಲು ಬ್ರುಯನೆ ಗೋಲು ಬಾರಿಸಿ ಮುನ್ನಡೆ ದ್ವಿಗುಣಗೊಳಿಸಿದರು.