ಐಸಿಸಿ ಟಿ-20 ರ‍್ಯಾಂಕಿಂಗ್: ಸ್ಮೃತಿ, ರೋಡ್ರಿಗಸ್ ಹಲವು ಸ್ಥಾನ ಜಿಗಿತ

ಐಸಿಸಿ ಟಿ-20 ರ‍್ಯಾಂಕಿಂಗ್: ಸ್ಮೃತಿ, ರೋಡ್ರಿಗಸ್ ಹಲವು ಸ್ಥಾನ ಜಿಗಿತ

HSA   ¦    Feb 12, 2019 03:27:35 PM (IST)
ಐಸಿಸಿ ಟಿ-20 ರ‍್ಯಾಂಕಿಂಗ್: ಸ್ಮೃತಿ, ರೋಡ್ರಿಗಸ್ ಹಲವು ಸ್ಥಾನ ಜಿಗಿತ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ರ‍್ಯಾಂಕಿಂಗ್ ನ ಬ್ಯಾಟ್ಸ್ ವುಮೆನ್ ವಿಭಾಗದಲ್ಲಿ ಭಾರತದ ಸ್ಮೃತಿ ಮಂದಾನ ಮತ್ತು ಜೆಮಿಮಾ ರೋಡ್ರಿಗಸ್ ಅವರು ಹಲವು ಸ್ಥಾನ ಜಿಗಿತ ಕಂಡಿದ್ದಾರೆ.

ಭಾರತ ತಂಡವು 0-3ರಿಂದ ಟಿ20 ಸರಣಿ ಸೋಲುಂಡಿದ್ದರೂ ಬ್ಯಾಟ್ಸ್ ವುಮೆನ್ ಗಳು ಮಾತ್ರ ರ‍್ಯಾಂಕಿಂಗ್ ನಲ್ಲಿ ಏರಿಕೆ ಕಂಡಿದ್ದಾರೆ. ರೋಡ್ರಿಗಸ್ ಸರಣಿಯಲ್ಲಿ 132 ರನ್ ಮಾಡಿ ನಾಲ್ಕು ಸ್ಥಾನ ಜಿಗಿತ ಕಂಡು ಎರಡನೇ ಸ್ಥಾನಕ್ಕೇರಿದ್ದಾರೆ. ಅದೇ ಸ್ಮೃತಿ ಮಂದಾನ ನಾಲ್ಕು ಸ್ಥಾನ ಜಿಗಿತ ಕಂಡು ಆರನೇ ಸ್ಥಾನಕ್ಕೇರಿದ್ದಾರೆ.

ಸ್ಮತಿ ಮಂದಾನ ಸರಣಿಯಲ್ಲಿ ಒಟ್ಟು 180 ರನ್ ಮಾಡಿದ್ದರು. ಇದರಲ್ಲಿ ಎರಡು ಅರ್ಧಶತಕಗಳಿದ್ದವು.

ಭಾರತದ ಸ್ಪಿನ್ನರ್ ರಾಧಾ ಯಾದವ್ 10ನೇ ಸ್ಥಾನ ಪಡೆದಿರುವರು. ಅದೇ ದೀಪ್ತಿ ಶರ್ಮಾ 14ನೇ ಸ್ಥಾನಕ್ಕೇರಿದ್ದಾರೆ.