ಹಾರ್ದಿಕ್ ಪಾಂಡ್ಯಗೆ ಪರ್ಪಲ್ ಕ್ಯಾಪ್

ಹಾರ್ದಿಕ್ ಪಾಂಡ್ಯಗೆ ಪರ್ಪಲ್ ಕ್ಯಾಪ್

HSA   ¦    May 07, 2018 01:09:32 PM (IST)
ಹಾರ್ದಿಕ್ ಪಾಂಡ್ಯಗೆ ಪರ್ಪಲ್ ಕ್ಯಾಪ್

ಮುಂಬಯಿ: ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಗಳಿಗೆ ನೀಡಲಾಗುವಂತಹ ಪರ್ಪಲ್ ಕ್ಯಾಪ್ ಮುಂಬಯಿ ಇಂಡಿಯನ್ಸ್ ನ ಹಾರ್ದಿಕ್ ಪಾಂಡ್ಯ ಪಾಲಾಗಿದ್ದು, ಗರಿಷ್ಠ ರನ್ ಬಾರಿಸಿರುವ ಅಂಬಟಿ ರಾಯುಡು ಅವರು ಆರೆಂಜ್ ಕ್ಯಾಪ್ ಪಡೆದಿದ್ದಾರೆ.

ಕೊಲ್ಕತ್ತಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಹಾರ್ದಿಕ್ 19 ರನ್ ಗಳಿಗೆ ಎರಡು ವಿಕೆಟ್ ಪಡೆದು, ಒಟ್ಟು ಹತ್ತು ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸಿರುವರು. ಉಮೇಶ್ ಯಾದವ್ 13 ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ.

ಕೊಲ್ಕತ್ತಾ ವಿರುದ್ಧ 13 ರನ್ ಗಳ ಗೆಲುವು ದಾಖಲಿಸಿಕೊಂಡು ಮುಂಬಯಿ ಪ್ಲೇ ಆಪ್ ಗೆ ಪ್ರವೇಶಿಸುವ ಅವಕಾಶ ಜೀವಂತವಾಗಿರಿಸಿಕೊಂಡಿದೆ.