ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಗೆ 13ನೇ ಬಾರಿ ಸಮಗ್ರ ಪ್ರಶಸ್ತಿ

ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಗೆ 13ನೇ ಬಾರಿ ಸಮಗ್ರ ಪ್ರಶಸ್ತಿ

Oct 09, 2017 05:41:49 PM (IST)
ಜಿಲ್ಲಾಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಗೆ 13ನೇ ಬಾರಿ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಬೆಥನಿ ಸಂಯುಕ್ತ ಪಿ.ಯು. ಕಾಲೇಜು ನೂಜಿಬಾಳ್ತಿಲದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪ.ಪೂ. ಕಾಲೇಜು ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ 13ನೇ ಬಾರಿಗೆ ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಬೆಥನಿ ಸಂಯುಕ್ತ ಪಿ.ಯು. ಕಾಲೇಜು ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ. ಕಾಲೇಜು, ಉಜಿರೆ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳಾದ ಶಶಿಧರ್ ಬಿ.ಎಲ್(ಪ್ರಥಮ), ಶಂಕ್ರಪ್ಪ(ದ್ವಿತೀಯ) ರಕ್ಷಿತ್ ಆರ್.(ತೃತೀಯ) ಮಿಲನ್ 4ನೇ ಸ್ಥಾನ ಪಡೆದರೆ, ಹರ್ಷಿತ್ ಕೆ, ಸರ್ಕಾರಿ ಪ.ಪೂ. ಕಾಲೇಜು, ಬೆಟ್ಟಂಪಾಡಿ (5ನೇ ಸ್ಥಾನ), ಬಸವರಾಜ್ ಗೋಡಿ, ಆಳ್ವಾಸ್(6ನೇ ಸ್ಥಾನ) ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿನಿಯರಾದ ಪ್ರಿಯಾ ಎಲ್. ಡಿ. (ಪ್ರಥಮ), ಸಂಧ್ಯಾ ಕೆ. ಆರ್(ದ್ವಿತೀಯ) ನಂದಿನಿ( ತೃತೀಯ), ರಕ್ಷಿತಾ(4ನೇ ಸ್ಥಾನ), ಎಸ್. ಡಿ. ಎಂ. ಉಜಿರೆ ವಿದ್ಯಾರ್ಥಿನಿಯರಾದ ಸಿಂಚನಾ(5 ನೇ ಸ್ಥಾನ) ತ್ರಿಷಾ(6ನೇ ಸ್ಥಾನ) ಪಡೆದುಕೊಂಡಿದ್ದಾರೆ.

ವಿಜೇತ ಕ್ರೀಡಾಪಟುಗಳು ನವೆಂಬರ್ ನಲ್ಲಿ 11 ರಿಂದ 13ರವರೆಗೆ ಬ್ರಹ್ಮಾವರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಗುಡ್ಡಗಾಡು ಓಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

More Images