ಮಹಿಳಾ ಬ್ಯಾಡ್ಮಿಂಟನ್: ಚಿನ್ನ, ಬೆಳ್ಳಿ ಎರಡೂ ಭಾರತಕ್ಕೆ!

ಮಹಿಳಾ ಬ್ಯಾಡ್ಮಿಂಟನ್: ಚಿನ್ನ, ಬೆಳ್ಳಿ ಎರಡೂ ಭಾರತಕ್ಕೆ!

HSA   ¦    Apr 15, 2018 12:24:59 PM (IST)
ಮಹಿಳಾ ಬ್ಯಾಡ್ಮಿಂಟನ್: ಚಿನ್ನ, ಬೆಳ್ಳಿ ಎರಡೂ ಭಾರತಕ್ಕೆ!

ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಬ್ಯಾಡ್ಮಿಂಟನ್ ಫೈನಲಿನಲ್ಲಿ ಭಾರತೀಯ ಆಟಗಾರ್ತಿಯರಿಬ್ಬರು ಸೆಣಸಾಡಿದ್ದು, ಸೈನಾ ನೆಹ್ವಾಲ್ ಅಂತಿಮವಾಗಿ ಸ್ವರ್ಣಕ್ಕೆ ಮುತ್ತಿಕ್ಕಿದರು.

ಫೈನಲ್ ನಲ್ಲಿ ಪಿ. ವಿ. ಸಿಂಧು ವಿರುದ್ಧ 21-18, 23-21ರಿಂದ ಗೆಲುವು ದಾಖಲಿಸಿಕೊಂಡ ಸೈನಾ ಸಹ ಆಟಗಾರ್ತಿ ವಿರುದ್ಧ ಮೇಲುಗೈ ಪಡೆದುಕೊಂಡರು.

ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಎರಡು ಪದಕಗಳು ಭಾರತದ ಪಾಲಾದವು. ಕಳೆದ ವರ್ಷ ಇವರಿಬ್ಬರು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಎದುರಾದಾಗ ಸೈನಾ ಗೆಲುವು ಪಡೆದಿದ್ದರು.