ಸುರೇಶ್ ರೈನಾ 4-6 ವಾರಗಳ ಕಾಲ ಕ್ರಿಕೆಟಿನಿಂದ ದೂರ

ಸುರೇಶ್ ರೈನಾ 4-6 ವಾರಗಳ ಕಾಲ ಕ್ರಿಕೆಟಿನಿಂದ ದೂರ

HSA   ¦    Aug 10, 2019 03:25:46 PM (IST)
ಸುರೇಶ್ ರೈನಾ 4-6 ವಾರಗಳ ಕಾಲ ಕ್ರಿಕೆಟಿನಿಂದ ದೂರ

ನವದೆಹಲಿ: ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಅವರು ನಾಲ್ಕರಿಂದ ಆರು ವಾರಗಳ ತನಕ ಕ್ರಿಕೆಟಿನಿಂದ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿದೆ.

ಈ ಸುದ್ದಿಯನ್ನು ದೃಢಪಡಿಸಿರುವ ಬಿಸಿಸಿಐಯ ಟ್ವಿಟ್ಟರ್ ಖಾತೆಯು ರೈನಾ ಅವರು ಆಸ್ಪತ್ರೆಯಲ್ಲಿ ಇರುವಂತಹ ಫೋಟೊವನ್ನು ಹಾಕಿದೆ.

ಕಳೆದ ಕೆಲವು ಸಮಯದಿಂದ ರೈನಾ ಮೊಣಕಾಲಿನ ನೋವಿನಿಂದ ಬಳುತ್ತಿದ್ದರು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ. ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಅವರು ಚೇತರಿಸಿಕೊಳ್ಳಬಹುದು. ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಬಿಸಿಸಿಐ ಹಾರೈಸುತ್ತದೆ ಎಂದು ಬಿಸಿಸಿಐ ಟ್ವಿಟ್ಟರ್ ಖಾತೆಯಲ್ಲಿ ಬರೆದಿದೆ.