ಏಶ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣ ಗೆದ್ದ ಬಜರಂಗ್ ಪೂನಿಯಾ

ಏಶ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣ ಗೆದ್ದ ಬಜರಂಗ್ ಪೂನಿಯಾ

HSA   ¦    Apr 23, 2019 07:16:30 PM (IST)
ಏಶ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣ ಗೆದ್ದ ಬಜರಂಗ್ ಪೂನಿಯಾ

ಕ್ಸಿಯಾಂಗ್(ಚೀನಾ): ಇಲ್ಲಿ ನಡೆಯುತ್ತಿರುವ ಏಶ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಬಜರಂಗ್ ಪೂನಿಯಾ ಅವರು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ.

65 ಕೆಜಿ ವಿಭಾಗದಲ್ಲಿ 24ರ ಹರೆಯದ ಪೂನಿಯಾ ಅವರು 2-5 ಫೈನಲಿನಲ್ಲಿ ಹಿಂದಿದ್ದರೂ ತಿರುಗೇಟು ನೀಡಿ ಏಶ್ಯನ್ ಗೇಮ್ಸ್ ನ ಕಂಚಿನ ಪದಕ ವಿಜೇತರಾದ ಕಝಕಿಸ್ತಾನದ ಸಯತ್ಬೆಕ್ ಒಕಾಸೊವ್ ಅವರನ್ನು 12-7ರಿಂದ ಪರಾಭಗೊಳಿಸಿದರು.

2017ರಲ್ಲಿ ನವದೆಹಲಿಯಲ್ಲಿ ಏಶ್ಯನ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಪೂನಿಯಾ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. 2018ರಲ್ಲಿ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.