ಸೆಂಚೂರಿಯನ್ ನಲ್ಲಿ ಲುಂಗಿ ದಾಳಿಗೆ ದಂಗಾದ ಟೀಂ ಇಂಡಿಯಾ

ಸೆಂಚೂರಿಯನ್ ನಲ್ಲಿ ಲುಂಗಿ ದಾಳಿಗೆ ದಂಗಾದ ಟೀಂ ಇಂಡಿಯಾ

HSA   ¦    Jan 17, 2018 04:20:26 PM (IST)
ಸೆಂಚೂರಿಯನ್ ನಲ್ಲಿ ಲುಂಗಿ ದಾಳಿಗೆ ದಂಗಾದ ಟೀಂ ಇಂಡಿಯಾ

ಸೆಂಚೂರಿಯನ್: ವೇಗಿ ಲುಂಗಿ ನಗಿಡಿ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಎರಡನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 151 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದ್ದು, ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.

ಸೆಂಚೂರಿಯನ್ ಮೈದಾನದಲ್ಲಿ ಬುಧವಾರ ಪ್ರೇಕ್ಷಕರು ಲುಂಗಿ ಡಾನ್ಸ್ ನೋಡಿ ಸಂಭ್ರಮಿಸಿದರು. ಆರು ವಿಕೆಟ್ ಉರುಳಿಸಿದ ಲುಂಗಿ ಟೀಂ ಇಂಡಿಯಾಗೆ ಮಾರಕ ಆಘಾತವಿಕ್ಕಿದರು. ಒಂದು ಹಂತದಲ್ಲಿ ರೋಹಿತ್ ಶರ್ಮಾ(47) ಮತ್ತು ಮಹಮ್ಮದ್ ಶಮಿ(28) 53 ರನ್ ಜತೆಯಾಟ ನಡೆಸಿ ತಂಡದ ಸೋಲು ತಪ್ಪಿಸಲು ಪ್ರಯತ್ನಿಸಿದರು. ಆದರೆ ರೋಹಿತ್ ವಿಕೆಟ್ ಪಡೆದ ರಬಾಡ ಗೆಲುವಿನ ಹಾದಿ ಸುಗಮಗೊಳಿಸಿದರು.

287 ರನ್ ಗಳ ಗೆಲುವಿನ ಗುರಿ ಪಡೆದಿದ್ದ ಭಾರತ 135 ರನ್ ಗಳಿಂದ ಸೋಲುಂಡಿದೆ. ದಕ್ಷಿಣ ಆಫ್ರಿಕಾ ಎರಡು ಟೆಸ್ಟ್ ಗೆದ್ದುಕೊಂಡು ಸರಣಿ ವಶಪಡಿಸಿಕೊಂಡಿರುವ ಕಾರಣ ಮೂರನೇ ಟೆಸ್ಟ್ ಕೇವಲ ಔಪಚಾರಿಕತೆಗೆ ನಡೆಯಲಿದೆ.