ರಾಜಸ್ಥಾನ್ ಮಣಿಸಿದ ಕೊಲ್ಕತ್ತಾ ಐಪಿಎಲ್ ಕ್ವಾಲಿಫೈಯರ್ ಗೆ

ರಾಜಸ್ಥಾನ್ ಮಣಿಸಿದ ಕೊಲ್ಕತ್ತಾ ಐಪಿಎಲ್ ಕ್ವಾಲಿಫೈಯರ್ ಗೆ

HSA   ¦    May 24, 2018 11:28:36 AM (IST)
ರಾಜಸ್ಥಾನ್ ಮಣಿಸಿದ ಕೊಲ್ಕತ್ತಾ ಐಪಿಎಲ್ ಕ್ವಾಲಿಫೈಯರ್ ಗೆ

ಕೊಲ್ಕತ್ತಾ: ದಿನೇಶ್ ಕಾರ್ತಿಕ್ ಮತ್ತು ಆಂಡ್ರೆ ರಸೆಲ್ ಆಟದ ಫಲವಾಗಿ ರಾಜಸ್ಥಾನ ರಾಯಲ್ ವಿರುದ್ಧ ಗೆಲುವು ದಾಖಲಿಸಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ಕ್ವಾಲಿಫೈಯರ್ ಹಂತಕ್ಕೇರಿದೆ.

ರಾಜಸ್ಥಾನ್ ವಿರುದ್ಧ 25 ರನ್ ಗಳ ಗೆಲುವು ದಾಖಲಿಸಿಕೊಂಡ ಕೊಲ್ಕತ್ತಾ ನಾಳೆ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಇದರಲ್ಲಿ ಗೆಲ್ಲುವ ತಂಡವು ಐಪಿಎಲ್ ಫೈನಲಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.

ರಾಜಸ್ಥಾನ್ ಗೆ ಅಜಿಂಕ್ಯ ರಹಾನೆ (46) ಮತ್ತು ರಾಹುಲ್ ತ್ರಿಪಾಠಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್ 50 ರನ್ ಬಾರಿಸಿದು. ಒಂದು ಹಂತದಲ್ಲಿ 16ನೇ ಓವರ್ ನಲ್ಲಿ 126 ರನ್ ಮಾಡಿದ್ದ ರಾಜಸ್ಥಾನ್ ಇದರ ಬಳಿಕ ಕುಸಿತ ಕಂಡು 170 ರನ್ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ಆರಂಭದಲ್ಲಿ ವಿಕೆಟ್ ಕಳಕೊಂಡರೂ ದಿನೇಶ್ ಕಾರ್ತಿಕ್ 52 ಮತ್ತು ರಸೆಲ್ 49 ರನ್ ನೆರವಿನಿಂದ ತಂಡ ಹೋರಾಟಕಾರಿ ಮೊತ್ತ ಪೇರಿಸಲು ನೆರವಾದರು.